Cnewstv.in / 1.12.2021/ ನವದಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
5 ವರ್ಷಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇದೇ ಅವಧಿಯಲ್ಲಿ ಎಷ್ಟು ಜನ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ ಗೊತ್ತಾ ??
ನವದೆಹಲಿ : ದೇಶದಲ್ಲಿ 2017 ರಿಂದ 2021ರ ನಡುವೆ ಅಂದರೆ ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವಿದೇಶಾಂಗ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 1,33,83,718 ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು 2017 ರಲ್ಲಿ 1,33,049 ಭಾರತೀಯರು, 2018 ರಲ್ಲಿ 1,34,561, 2019 ರಲ್ಲಿ 1,44,017, 2020 ರಲ್ಲಿ 85,248 ಮತ್ತು ಸೆಪ್ಟೆಂಬರ್, 30 2021 ರವರೆಗೆ 1,11,287 ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಹೇಳಿದರು.
2016 ರಿಂದ 2020ರ ನಡುವೆ 4,177 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದ್ದರೆ. ಈ ಅವಧಿಯಲ್ಲಿ ಒಟ್ಟು 10,645 ಜನ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 7,782 ಜನ ಪಾಕಿಸ್ತಾನದವರು. 795 ಜನ ಆಫ್ಘಾನಿಸ್ತಾನದವರು, 205 ಜನ ಶ್ರೀಲಂಕಾದವರು, 184 ಜನ ಬಾಂಗ್ಲಾದೇಶದವರು, 167ಜನ ನೇಪಾಳದವರು, 227 ಜನ ಅಮೆರಿಕಾದವರು ಹಾಗೂ 185 ಜನ ಕೀನ್ಯಾಗೆ ಸೇರಿದ್ದಾರೆ.
2016ರಲ್ಲಿ ಭಾರತೀಯ ಪೌರತ್ವಕ್ಕೆ ಒಟ್ಟು 2,262 ಜನ ಅರ್ಜಿ ಸಲ್ಲಿಸಿದ್ದಾರೆ. 2017 ರಲ್ಲಿ 855, 2018 ರಲ್ಲಿ 1,758, 2019 ರಲ್ಲಿ 4,224 ಹಾಗೂ 2020 ರಲ್ಲಿ 1,546 ಜನ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಒದಿ : https://cnewstv.in/?p=6965
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv