Cnewstv.in / 27.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
MPI ವರದಿ : ದೇಶದಲ್ಲೇ ಅತ್ಯಂತ ಬಡ ರಾಜ್ಯ ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶ. 19ನೇ ಸ್ಥಾನದಲ್ಲಿ ಕರ್ನಾಟಕ.
ಹೊಸದಿಲ್ಲಿ: ಭಾರತದ ಬಹು ಆಯಾಮ ಬಡತನ ಸೂಚ್ಯಂಕ ( MPI – Multi Dimensional Poverty Index ) ವರದಿಯನ್ನು ಬಿಡುಗಡೆ ಮಾಡಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಆಧಾರದ ಮೇಲೆ ಸರ್ವೇಯನ್ನು ಮಾಡಿ ವರದಿ ಸಲ್ಲಿಸಿದೆ. ಈ ವರದಿಯ ಪ್ರಕಾರ ದೇಶದಲ್ಲೇ ಅತ್ಯಂತ ಬಡ ರಾಜ್ಯಗಳು ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶ.
ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಜೀವನ ಮಟ್ಟ ಮುಂತಾದ ಕ್ಷೇತ್ರಗಳನ್ನು ಒಳಗೊಂಡಿರುವ 12 ಪ್ರಮುಖ ಅಂಶಗಳನ್ನು ಬಳಸಿಕೊಂಡು ರಾಷ್ಟ್ರೀಯ MPI ಅಳತೆಯನ್ನು ನಿರ್ಮಿಸಲಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಎಂಪಿಐ ವರದಿಯ ಪ್ರಕಾರ ಬಡತನ ಸೂಚ್ಯಂಕದಲ್ಲಿ ಕರ್ನಾಟಕವು 19ನೇ ಸ್ಥಾನದಲ್ಲಿದ್ದು, ರಾಜ್ಯದ ಜನಸಂಖ್ಯೆಯ ಶೇ. 13.16ರಷ್ಟು ಮಂದಿ ಬಡತನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಅತೀ ಹೆಚ್ಚು, ಶೇ. 51.91ರಷ್ಟು ಮಂದಿ ಬಡವರಾಗಿದ್ದಾರೆ. 2ನೇ ಸ್ಥಾನದಲ್ಲಿರುವ ಝಾರ್ಖಂಡ್‌ನಲ್ಲಿ ಶೇ. 37.79 ಮಂದಿ, 3ನೇ ಸ್ಥಾನದಲ್ಲಿರುವ ಉತ್ತರಪ್ರದೇಶದ ಶೇ. 37.79 ಮಂದಿ ಬಡವರು ಎಂದು ಉಲ್ಲೇಖಿಸಲಾಗಿದೆ. ವಿಶೇಷ ವೆಂದರೆ ಅತೀ ಹೆಚ್ಚು ಅಪೌಷ್ಟಿಕತೆ ಎದುರಿಸುತ್ತಿರುವ ಜನರ ಪಟ್ಟಿಯಲ್ಲೂ ಬಿಹಾರ ಮೊದಲ ಸ್ಥಾನದಲ್ಲಿದೆ. ಶಾಲೆ, ಅಡುಗೆ ಇಂಧನ, ವಿದ್ಯುತ್ ವಂಚಿತರಾದವರ ಸಂಖ್ಯೆಯೂ ಬಿಹಾರದಲ್ಲೇ ಹೆಚ್ಚಿದೆ.
ಕೇರಳ ಬಡತನ ಪಟ್ಟಿಯ ಕೊನೆಯಲಿದ್ದು, ಇಲ್ಲಿ ಕೇವಲ ಶೇ. 0.71 ರಷ್ಟು ಮಂದಿಗೆ ಮಾತ್ರ ಬಡತನವಿದೆ. ಗೋವಾದಲ್ಲಿ ಶೇ. 3.76 ಮಂದಿ, ಸಿಕ್ಕಿಂನ ಶೇ. 3.82, ತವೀಳುನಾಡು ಶೇ. 4.89, ಪಂಜಾಬ್‌ನ ಶೇ. 5.59 ಮಂದಿ ಬಡವರು ಎಂದು ವರದಿ ಹೇಳಿದೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಾದ್ರಾ ಮತ್ತು ನಗರ ಹವೇಲಿ ಶೇ. 27.36, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ 12.58, ದಮನ್ ಮತ್ತು ದಿಯು ಶೇ. 6.82 ಮತ್ತು ಚಂಡೀಗಢ ಶೇ. 5.97 ಬಡ ಪ್ರದೇಶಗಳಾಗಿ ಹೊರಹೊಮ್ಮಿವೆ. ಪುದುಚೇರಿಯು ತನ್ನ ಜನಸಂಖ್ಯೆಯ ಶೇಕಡಾ 1.72 ರಷ್ಟು ಬಡವರಾಗಿದ್ದರೆ, ಲಕ್ಷದ್ವೀಪ ಶೇ. 1.82, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ. 4.30 ಮತ್ತು ದೆಹಲಿಯಲ್ಲಿ ಶೇ. 4.79ರಷ್ಟು ಜನ ಸಂಖ್ಯೆ ಬಡತನ ಹೊಂದಿದೆ.
2015 ರಲ್ಲಿ 193 ದೇಶಗಳು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಚೌಕಟ್ಟು, ಅಭಿವೃದ್ಧಿ ನೀತಿಗಳು, ಸರ್ಕಾರದ ಆದ್ಯತೆಗಳು ಮತ್ತು ಪ್ರಪಂಚದಾದ್ಯಂತ ಅಭಿವೃದ್ಧಿ ಪ್ರಗತಿಯನ್ನು ಅಳೆಯಲು ಮೆಟ್ರಿಕ್‌ಗಳನ್ನು ಮರುವ್ಯಾಖ್ಯಾನಿಸಲಾಗಿದ್ದು, ಅವುಗಳ ಆಧಾರದಲ್ಲಿ ಬಡತನ ಸೂಚ್ಯಂಕವನ್ನು ಗುರುತಿಸಲಾಗುತ್ತದೆ.
ಇದನ್ನು ಒದಿ : https://cnewstv.in/?p=6924
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments