cnewstv.in /18.10.2021/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರೈತರು ನಮ್ಮ ದೇಶದ ಬೆನ್ನೆಲುಬು. ಆದರೆ ಅದೇ ರೈತ ಅಂದರೆ ನಮ್ಮ ಜನರು ಗೋಳು ಅಂತಾರೆ. ಅ ರೈತ ಹರಿಸುವ ಬೆವರಿನ ಬೆಲೆ ಉಣ್ಣುವವರಿಗೆ ಏನು ಗೊತ್ತು ಅಲ್ವ ??
ರೈತ ಅನ್ನ ಬೆಳೆಯಬೇಕು ಅಂದರೆ ಅವನಿಗೆ ಪ್ರಮುಖವಾಗಿ ಬೇಕಾಗಿರುವುದು ಗೊಬ್ಬರ. ಈ ಹಿಂದೆಯೂ ಸಹ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಸಿಗದೇ ರೈತರು ಪರದಾಡಿದ್ದಾರೆ. ಇಂದಿಗೂ ಸಹ ಈ ಪರದಾಟ ನಿಂತಿಲ್ಲ. ಒಂದು ಕಡೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ಮಾಡುತ್ತಿರುವ ಹೋರಾಟ ಒಂದು ವರ್ಷ ತಲುಪುತ್ತಿದೆ. ಈ ವೇಳೆಯಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಸರ್ಕಾರ ಅದು ಯಾವ ಕಾರಣಕ್ಕೆ ರೈತರ ಕಡೆ ಗಮನ ಹರಿಸುತ್ತಿಲ್ಲೋ ತಿಳಿಯದಾಗಿದೆ.
ಹೌದು ರೈತನ ಭೂಮಿಗೆ ಗೊಬ್ಬರವೇ ಸಿಗುತ್ತಿಲ್ಲ, ರಸಗೊಬ್ಬರದ ಪರದಾಟ ಇನ್ನೂ ನಿಂತಿಲ್ಲ. ಭತ್ತ, ಅಡಿಕೆ, ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಬೇಕಾಗಿರುವಂತಹ
ಯೂರಿಯಾ, ಡಿಎಪಿ, ಪೋಟ್ಯಾಷ್ ನಂತಹ ರಸಗೊಬ್ಬರಗಳು ಸಿಗದೇ ರೈತರು ನಿತ್ಯ ಪರದಾಡುತ್ತಿದ್ದಾರೆ.
ಮತ್ತೊಂದೆಡೆ ರಸಗೊಬ್ಬರಗಳ ಬೆಲೆ ಗಗನಕ್ಕೇರಿದೆ. 2021 ರ ಏಪ್ರಿಲ್ 15ರಂದು ಪ್ರಮುಖ ರಸಗೊಬ್ಬರಗಳ ಆದ MRP ಬೆಲೆ 875 ರೂಪಾಯಿಯಾಗಿತ್ತು, ಅದೇ ಸೆಪ್ಟೆಂಬರ್ ನಲ್ಲಿ 1040 ರೂಪಾಯಿಗಳಾಗಿವೆ. ಅಂತೆಯೇ
FACT – 975 ರಿಂದ 1325 ರೂಪಾಯಿಗಳು, CIL – 900 ರಿಂದ 1250 ರೂಪಾಯಿ, ZIL – 1285 ರಿಂದ 1575, IPL – 1075 ರಿಂದ 1250 ರೂಪಾಯಿಗಳು, RCF – 1060 ರಿಂದ 1350 ರೂಪಾಯಿಗಳು ಹೆಚ್ಚಳವಾಗಿದೆ.
ಈಗಾಗಲೇ ರೈತರು ಬೆಳೆದಂತಹ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರಸಗೊಬ್ಬರಗಳ ಪರದಾಟ, ರಸಗೊಬ್ಬರಗಳ ಬೆಲೆ ಏರಿಕೆ ಮತ್ತಷ್ಟು ರೈತರನ್ನ ಕಂಗಾಲಾಗಿಸಿದೆ. ಇನ್ನಾದರೂ ಸರ್ಕಾರ ಅನ್ನದಾತನ ನೆರವಿಗೆ ಬರಲಿ ಎನ್ನುವುದೇ ನಮ್ಮ ಆಶಯ.
-ಚೈತ್ರ ಸಜ್ಜನ್
ಇದನ್ನು ಓದಿ : https://cnewstv.in/?p=6487
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments