Breaking News

ಹಿರಿಯರು ಹೇಳಿಕೊಟ್ಟ ಊಟದ ಕಲೆಯ ನಿಯಮಗಳು.

https://youtube.com/channel/UCZdIza7k4B-NHp5ZVOL2MBg

https://www.facebook.com/cnewstvindia/

ಹಿರಿಯರು ಹೇಳಿಕೊಟ್ಟ ಊಟದ ಕಲೆಯ ನಿಯಮಗಳು

1) ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು.
2) ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು.
3) ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು..
4) ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು…..
5) ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ – ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ ಇರಬಾರದು….
6) ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು.
6) ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
7) ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
8) ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು….
9) ಯಾರೊಬ್ಬರೂ ಅತ್ತಿಂದಿತ್ತ ಅಡ್ಡಕಸುಬಿ ಓಡಾಡಬಾರದು…..
10) ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
11) ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
12) ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು…..
13) ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು…
14) ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು…..
15) ಅಂಗೈ ಮುಂಗೈ ಮೂತಿಗಳಿಗೆ ಅನ್ನ – ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು……
16) ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು….
17) ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
18) ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು…. ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು…
19) ಉಣ್ಣುವ ತುತ್ತು ಎಣಿಸಬಾರದು..ಮುದ್ದೆ – ರೊಟ್ಟಿ ಎಣಿಸಬಾರದು…. ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು
20) ಇಷ್ಟು ತಿಂದ – ಅಷ್ಟು ತಿಂದ ಎಂದು ಮಾತನಾಡಬಾರದು….
21) ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು. (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
22) ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು
23) ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು.
24) ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು.
25) ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ – ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು.
26) ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು.ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
27) ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು.
28) ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು…..
29) ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
30) ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
31) ಬಾಡೂಟದೊಂದಿಗೆ ಪ್ರತ್ಯೇಕ ಸಸ್ಯಾಹಾರದ ಸಾರು ಸೇವಿಸಬಾರದು.
32) ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು.
33) ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು. ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು.
34) ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು.
35) ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು.
36) ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು.
37) ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು.
38) ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು.
39) ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು.
40) ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು.
41) ಊಟ ಮಾಡಿ ಮೈ ಮುರಿಯಬಾರದು
42) ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ
43) ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು
44) ಎಂಜಲ ಕೈನಲ್ಲಿ ತಟ್ಟೆ ಲೋಟ ಇತರೆ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು
45) ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು
46) ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು
47) ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
48) ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು
49) ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಅಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ದ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು.
50) ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.

“ಹಿಂದಿನ ಹಿರಿಯರ ಹಿತ ನುಡಿ
ಕಡಿಗಣಿಸದೆ ಪಾಲಿಸುವುದು ಉತ್ತಮ .

ಸಂಗ್ರಹ ಸಿ.ಆರ್.ಸತ್ಯ ಪ್ರಕಾಶ್ ವಕೀಲರು.
ಕೃಪೆ : WhatsApp

ಇದನ್ನು ಓದಿ : https://cnewstv.in/?p=6470

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments