Breaking News

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ : 65 ಗಂಟೆ 20 ಸಭೆ, ವಿಮಾನದಲ್ಲಿ 4 ಮೀಟಿಂಗ್.

Cnewstv.in / 27.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನವಹೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 22 ಬುಧವಾರದಂದು ನವದೆಹಲಿಯಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಅಂದಿನಿಂದ ಸೆಪ್ಟೆಂಬರ್ 25ರಂದು ಭಾರತಕ್ಕೆ ಹಿಂತಿರುಗಿದರು. ಅಲ್ಲಿಯತನಕ ನರೇಂದ್ರ ಮೋದಿ ಅವರು ಒಟ್ಟು 20 ಸಭೆಗಳನ್ನು ಭಾಗವಹಿಸಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲೂ ಸಹ 4 ಸಭೆಗಳನ್ನು ನಡೆಸಿದ್ದಾರೆ.

ಸೆಪ್ಟೆಂಬರ್ 22 : ನವದೆಹಲಿಯಿಂದ ಬುಧವಾರ ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ 2 ಸಭೆ ನಡೆಸಿ, ಅಮೆರಿಕದಲ್ಲಿ ಹೋಟೆಲ್‌ನಲ್ಲಿ 3 ಸಭೆ ನಡೆಸಿದ್ದಾರೆ.

ಸೆಪ್ಟೆಂಬರ್ 23 : ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜೊತೆಗೆ ಸಭೆ, ಜಪಾನ್‌ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳ ಜತೆ ಎರಡು ದ್ವಿಪಕ್ಷೀಯ ಸಭೆ ಹಾಗೂ ವಿವಿಧ ಸಂಸ್ಥೆಗಳ ಸಿಇಒ ಜೊತೆಗೆ 5 ಸಭೆ ನಡೆಸಿದ್ದಾರೆ. ಅದರೊಂದಿಗೆ 3 ಆಂತರಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಸೆಪ್ಟೆಂಬರ್ 24 : ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಸಭೆ, ಕ್ವಾಡ್‌ ಸಭೆ ಹಾಗೂ 4 ಆಂತರಿಕ ಸಭೆ ನಡೆಸಿದ್ದಾರೆ.

ಸೆಪ್ಟೆಂಬರ್ 25 : ಭಾರತಕ್ಕೆ ವಾಪಸಾಗುವಾಗ ವಿಮಾನದಲ್ಲಿಯೇ ಕುಳಿತು 2 ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : https://cnewstv.in/?p=6237

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*