Breaking News

ಪ್ರೀತಿಯ ಶ್ವಾನ ಐಷಾರಾಮಿಯಾಗಿ ಪ್ರಯಾಣಿಸಲಿ ಎಂದು ಸಂಪೂರ್ಣ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ಬುಕ್ ಮಾಡಿದ ಮಾಲಿಕ.

Cnewstv.in / 20.09.2021/ ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪ್ರೀತಿಯ ಶ್ವಾನ ಐಷಾರಾಮಿಯಾಗಿ ಪ್ರಯಾಣಿಸಲಿ ಎಂದು ಸಂಪೂರ್ಣ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ಬುಕ್ ಮಾಡಿದ ಮಾಲಿಕ.

ಮುಂಬೈ : ಪ್ರೀತಿಯಿಂದ ಸಾಕಿದ ನಾಯಿ ಐಷಾರಾಮಿಯಾಗಿ ಪ್ರಯಾಣಿಸಲಿ ಎಂದು ಸಂಪೂರ್ಣ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ಅನ್ನು ಬುಕ್ ಮಾಡಿದ್ದಾರೆ.

ಮುಂಬೈನಿಂದ ಚೆನ್ನೈಗೆ ಎರಡು ಗಂಟೆಗಳ ಅವಧಿಯ ವಿಮಾನ ಪ್ರಯಾಣಕ್ಕಾಗಿ ಮಾಲೀಕರು 2.5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಮುಂಬೈ – ಚೆನ್ನೈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ಸೀಟಿನ ದರ 20,000 ರೂಪಾಯಿಗಳು. ‌ಬುಧವಾರ ಬೆಳಿಗ್ಗೆ ಶ್ವಾನವು ಏರ್ ಇಂಡಿಯ AL-671 ಹತ್ತಿತ್ತು.

ಏರ್ ಇಂಡಿಯಾ ಎ 320 ವಿಮಾನದಲ್ಲಿ ಜೆ ಕ್ಲಾಸ್ ಕ್ಯಾಬಿನ್ 12 ಆಸನಗಳನ್ನು ಹೊಂದಿದೆ. ಅದರಲ್ಲಿ ಮುದ್ದಾದ ನಾಯಿ ಮರಿಯು ಆರಾಮಾಗಿ ಹಾರಿಹೋಯಿತು.‌

ಈ ಹಿಂದೆಯೂ ಸಹ ಏರ್ ಇಂಡಿಯಾ ವಿಮಾನದ ಬಿಸ್ ನೆಸ್ ಕ್ಯಾಬಿನ್ ನಲ್ಲಿ ಸಾಕುಪ್ರಾಣಿಗಳು ಪ್ರಯಾಣಿಸಿದವು.ಆದರೆ ಬಹುಶಃ ಇದೇ ಮೊದಲ ಬಾರಿಗೆ ಇಡೀ ಬಿಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದು.

ಇದನ್ನು ಓದಿ : https://cnewstv.in/?p=6097

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*