Cnewstv.in / 16.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಹೈಕೋರ್ಟ್ ಆದೇಶದ ಮೇರೆಗೆ 2009ಕ್ಕೆ ಮೊದಲು ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳು ಹಾಗೂ 2009ರ ನಂತರ ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳು ಎಂದು 2 ಪ್ರತ್ಯೇಕ ಪಟ್ಟಿಯನ್ನು ತಯಾರು ಮಾಡಲಾಗಿದೆ. ಅಂತೆಯೇ ಬೆಂಗಳೂರಿನಲ್ಲಿ 2009ಕ್ಕೂ ಮೊದಲು ಮತ್ತು ನಂತರ ನಿರ್ಮಿಸಿದ ದೇವಾಲಯಗಳ ಪಟ್ಟಿ ಮಾಡಲಾಗಿದೆ
ಬೆಂಗಳೂರು ನಗರದ 198 ವಾರ್ಡ್ ಗಳಲ್ಲಿ 6406 ಧಾರ್ಮಿಕ ಕೇಂದ್ರಗಳ ಪಟ್ಟಿಯನ್ನು ತಯಾರು ಮಾಡಲಾಗಿತ್ತು. ಅದರಲ್ಲಿನ 8 ವಲಯಗಳಲ್ಲಿನ 860 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಅಂತಿಮ ಪಟ್ಟಿಯನ್ನು ತಯಾರಿಸಲಾಗಿದೆ. ಪಾರಂಪರಿಕ ಹಿನ್ನೆಲೆ, ಇತಿಹಾಸ ಹೊಂದಿರುವಂತಹ ಪ್ರಸಿದ್ಧ ದೇವಾಲಯಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ಸರಕಾರಿ ಜಾಗದಲ್ಲಿ 2111 ಹಾಗೂ ಖಾಸಗಿ ಜಾಗದಲ್ಲಿ 4,295 ಸೇರಿದಂತೆ ಒಟ್ಟು 6406 ಅನಧಿಕೃತ ಶ್ರದ್ಧಾ ಕೇಂದ್ರಗಳು ನಿರ್ಮಾಣಗೊಂಡಿದೆ. ಇದರಲ್ಲಿ ಸಾಕಷ್ಟು ದೇವಾಲಯಗಳನ್ನು ಸ್ಥಳಾಂತರಿಸಲಾಗಿದೆ ಹಾಗೂ ಸಾಕಷ್ಟು ದೇವಾಲಯಗಳನ್ನು ಅಧಿಕೃತಗೊಳಿಸಲಾಗಿದೆ. ಉಳಿದಂತೆ 860 ಕೇಂದ್ರಗಳನ್ನು ತೆರವುಗೊಳಿಸಲು ಬಿಬಿಎಂಪಿ ಪಟ್ಟಿ ತಯಾರಿಸಲಾಗಿದೆ.
ಇದನ್ನು ಓದಿ : https://cnewstv.in/?p=5966
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments