Twin Tower Newyork : ಮರೆಯಲಾಗದ ದಿನ.

Cnewstv.in / 11.09.2021 /ನ್ಯೂಯಾರ್ಕ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನ್ಯೂಯಾರ್ಕ್ : ವಿಶ್ವದ ದೊಡ್ಡಣ್ಣ ಅಮೇರಿಕಾ ಮರೆಯಲಾಗದ ದಿನವಿದು. ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಉಗ್ರರು ದಾಳಿ ನಡೆಸಿ 20 ವರ್ಷಗಳೇ ಕಳೆದು ಹೋಗಿದೆ.

2001ರ ಸೆಪ್ಟೆಂಬರ್ 11ರಂದು ಅಲ್ ಕೈದಾ ಉಗ್ರರು ಟ್ವಿನ್ ಟವರ್ ಮೇಲೆ ವಿಮಾನದಿಂದ ದಾಳಿ ನಡೆಸಿದರು. ಉಗ್ರರ ದಾಳಿಯಿಂದ ನೋಡುನೋಡುತ್ತಲೇ ಟ್ವಿನ್ ಟವರ್ ಗೋಪುರ ನೆಲಕ್ಕುರುಳಿತು. 4 ವಿಮಾನಗಳನ್ನು ಅಪಹರಿಸಿದ್ದ, 19 ಅಲ್ ಖೈದಾ ಉಗ್ರರ, ದಾಳಿಯಿಂದಾಗಿ 3 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 6 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಅಮೇರಿಕಾದ ಟ್ವಿನ್ ಟವರ್ ಮೇಲಿನ ದಾಳಿಯನ್ನು ಅಮೇರಿಕಾ ಅಧ್ಯಕ್ಷ ತೀವ್ರವಾಗಿ ಖಂಡಿಸಿದರು. ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ ನೇತೃತ್ವದಲ್ಲಿ “ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ” ಎಂಬ ಕಾರ್ಯಾಚರಣೆ ನಡೆಸಿದರು.

ಟ್ವಿನ್ ಟವರ್ ದಾಳಿಯ ಪ್ರಮುಖ ರೂವಾರಿಯಾಗಿದ್ದ ಒಸಾಮಾ ಬಿನ್ ಲಾಡೆನ್ ಗಾಗಿ ಹುಡುಕಾಟ ನಡೆಸಿದರು. 10 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನ 2011 ರ ಮೇ.‌1 ರಂದು ಅಮೆರಿಕ ಪಡೆ ಕೊಂದುಹಾಕಿದರು.

ಇದನ್ನು ಓದಿ : https://cnewstv.in/?p=5870

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*