Breaking News

ಸಾರ್ವಜನಿಕ ಗಣೇಶ ಹಬ್ಬಕ್ಕೆ ಷರತ್ತುಬದ್ದ ಅನುಮತಿ ನೀಡಿದ ಸರ್ಕಾರ. ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

Cnewstv.in / 05.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಇಂದು ತಜ್ಞರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗಣೇಶ ಹಬ್ಬಕ್ಕೆ ಷರತ್ತುಬದ್ದ ಅನುಮತಿ ನೀಡಿದ್ದಾರೆ.

ಈ ಷರತ್ತುಗಳನ್ನು ಕಡ್ಡಾಯ.

* ಪಾಸಿಟಿವಿಟಿ ರೇಟ್ ಶೇ. 2ಕ್ಕಿಂತ ಕಡಿಮೆ ಇದ್ದರೆ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು.

* ಗಣೇಶಮೂರ್ತಿಯನ್ನು 5 ದಿನದೊಳಗಾಗಿ ವಿಸರ್ಜನೆ ಮಾಡಬೇಕು.

* ನಗರಗಳಲ್ಲಿ ವಾರ್ಡಿಗೆ ಒಂದು ಗಣೇಶಮೂರ್ತಿ ಇಡಬೇಕು. ಹಳ್ಳಿಗಳಲ್ಲಿ ಸ್ಥಳಿಯಾಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.

*50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲ.

*ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕುಲಸೇಕರನ್ ನಡೆಸಲಾಗುವುದು.

*ಮೆರವಣಿಗೆ, ಮನೋರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.

*ಸರಳವಾಗಿ ಈ ಬಾರಿ ಗಣೇಶೋತ್ಸವನ್ನು ಆಚರಿಸಬೇಕು.

ಇದನ್ನು ಓದಿ : https://cnewstv.in/?p=5780

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*