Cnewstv.in / 01.09/2021 / ದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೆಹಲಿ : ಕೊರೊನಾ ದಿಂದಾಗಿ ಆರ್ಥಿಕವಾಗಿ ತೊಂದರೆಪಡುತ್ತಿರುವ ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಗುಲಿದೆ. ಅಡುಗೆ ಅನಿಲ ಬೆಲೆ ಮತ್ತೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಅಡುಗೆ ಅನಿಲ ಬೆಲೆ ಏರಿಕೆ ಯಾಗಿದ್ದು ಇದೀಗ ಮತ್ತೆ ಏರಿಕೆಯಾಗಿದೆ.
ಕೇವಲ ಹದಿನೈದು ದಿನಗಳ ಅಂತರದಲ್ಲಿ 50 ರೂ ಹೆಚ್ಚಳವಾಗಿದೆ. ತೈಲ ಮಾರುಕಟ್ಟೆ ಕಂಪೆನಿಗಳು ಮತ್ತು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿವೆ. 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ.ಹೆಚ್ಚಿಸಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ. ಪ್ರತಿ ಸಿಲಿಂಡರ್ ಗೆ 75ರೂ ಹೆಚ್ಚಳ ಮಾಡಲಾಗಿದೆ.
ಎಲ್ ಪಿಜಿ ಸಿಲಿಂಡರ್ 25ರೂ. ಹೆಚ್ಚಳದ ನಂತರ, 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಈಗ 884.5ರೂ ಗೆ ಮಾರಾಟವಾಗುತ್ತಿದೆ. ಈ ಮೊದಲು ರೂ 859.50 ಆಗಿತ್ತು. ಈ ಹಿಂದೆ ಆಗಸ್ಟ್ 17ರಂದು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 25ರೂ.ಮತ್ತು ಜುಲೈ ಒಂದರಂದು ಎಲ್ ಪಿಜಿ ಸಿಲಿಂಡರ್ ನ ಬೆಲೆಯನ್ನು 25.50ರೂ. ಹೆಚ್ಚಳ ಮಾಡಲಾಗಿತ್ತು. ಎಲ್ ಪಿಜಿ ಸಿಲಿಂಡರ್ ಹೊರತಾಗಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೂಡ ಬೆಲೆ ರೂ75 ರಷ್ಟು ದುಬಾರಿಯಾಗಿವೆ.
ಇದನ್ನು ಒದಿ : https://cnewstv.in/?p=5690
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments