Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ತಾಯಂದಿರು ತಮ್ಮ ಮಕ್ಕಳಿಗೆ ಶಾಲು, ಧೋತಿ, ಕಿವಿಓಲೆ, ಕೈಬಳೆ, ಕೊಳಲು, ನವಿಲು ಗರಿಯ ಕೀರಿಟ ಹಾಕಿ ನಾನಾ ವಿಧವಾಗಿ ಅಲಂಕರಿಸುತ್ತಾರೆ. ತೊದಲು ಮಾತನಾಡುವ ಕಂದಮ್ಮಗಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಒಂದು ಚಂದ.
(ಫೋಟೋ : ರಿಧಿತ್ ರಾಜೇಶ್)
ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿಯೆಂದು ಪ್ರತಿಯೊಂದು ಬಡಾವಣೆಗಳಲ್ಲಿಯೂ ಸ್ಪರ್ಧೆಗಳು ನಡೆಯಿತು. ಪುಟ್ಟ -ಪುಟ್ಟ ಮಕ್ಕಳು ಕೃಷ್ಣನ ವೇಷವನ್ನು ಧರಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆದರೆ ಇದೀಗ ಟ್ರೆಂಡ್ ಬದಲಾಗಿದೆ ಎಲ್ಲವೂ ಆನ್ ಲೈನ್.
ಇವತ್ತು ಎಲ್ಲರ ವಾಟ್ಸಾಪ್, ಫೇಸ್ಬುಕ್, ಇನ್ಸಾಟ್ ಗಳಲ್ಲಿ ಪುಟ್ಟ ಕೃಷ್ಣನ ನೋಡಬಹುದು. ಒಂದೆಡೆ ಕೊರೊನಾ ಭೀತಿಯಾದರೆ ಮತ್ತೊಂದೆಡೆ ಎಲ್ಲಾ ಸ್ಪರ್ಧೆಗಳು ಆನ್ ಲೈನ್ ನಲ್ಲಿ ನಡೆಯುತ್ತಿದೆ. ಹಾಗಾಗಿ ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣನ ರೀತಿಯಲ್ಲಿ ಸುಂದರವಾಗಿ ಅಲಂಕರಿಸಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದಾರೆ.
(ಫೋಟೋ : ಮೇದಿನಿ ಎಸ್ ಸಾಗರ್)
ಒಟ್ಟಿನಲ್ಲಿ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತಾಯಂದಿರು ತಮ್ಮ ಮಕ್ಕಳನ್ನು ನಂದನವನದ ಕೃಷ್ಣ ನಂತೆ ಅಲಂಕರಿಸುತ್ತಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕೃಷ್ಣದೇ ಕಾರುಬಾರು.
ಇದನ್ನು ಒದಿ : https://cnewstv.in/?p=5652
(ಫೋಟೋ : ಅಭ್ಯುದ ಭಟ್ಟ ಕೆ.ಎ)
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments