Cnewstv.in / 19.08.2021 / New Delhi / Contact for News and Information 9916660399
ನವದೆಹಲಿ : ಉತ್ಪಾದಕರು ತಮ್ಮ ಆದ್ಯತೆಯಾಗಿ ಬಯಸುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಭಾರತ ಅಮೆರಿಕವನ್ನು ಹಿಂದಿಕ್ಕಿದ.
ಉತ್ಪಾದಕರ ಪ್ರಕಾರ ಗುಣಮಟ್ಟ, ಖರ್ಚು, ಸ್ಪರ್ಧಾತ್ಮಕತೆ ಗಳನ್ನು ಪರಿಶೀಲಿಸಿದರೆ ಭಾರತ ಉತ್ಪಾದಕರಿಗೆ ಪ್ರಿಯ ವೆನಿಸಿಕೊಂಡಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಕಶ್ ಮನ್ ಆ್ಯಂಡ್ ವೇಕ್ ಫೀಲ್ಡ್ ಈ ವರ್ಷದ ಜಾಗತಿಕ ಉತ್ಪಾದಕರ ಸವಾಲುಗಳ ಸೂಚ್ಯಂಕವನ್ನಾಧರಿಸಿ ಮಾಹಿತಿಯನ್ನು ನೀಡಿದೆ.
ಕಳೆದ ವರ್ಷದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಚೀನಾ, ಎರಡನೇ ಸ್ಥಾನದಲ್ಲಿ ಅಮೆರಿಕ ಹಾಗೂ ಮೂರನೇ ಸ್ಥಾನದಲ್ಲಿ ಭಾರತವಿತ್ತು. ಈ ವರ್ಷದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಎಂದಿನಂತೆ ಚೀನ, ಎರಡನೇ ಸ್ಥಾನದಲ್ಲಿ ಭಾರತ, ಮೂರನೇ ಸ್ಥಾನದಲ್ಲಿ ಅಮೆರಿಕ, ಆ ನಂತರದ ಸ್ಥಾನಗಳಲ್ಲಿ ಕೆನಡಾ, ಇಂಡೋನೇಷ್ಯಾ, ಥೈಲ್ಯಾಂಡ್,ಫೋಲೆಂಡ್, ಮಲೇಷಿಯಾ, ಪಡೆದುಕೊಂಡಿದೆ.
ಇದನ್ನು ಓದಿ : https://cnewstv.in/?p=5594
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments