Cnewstv.in / 23.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ವತಿಯಿಂದ ಇಂದು ಕೃಷಿ ಭವನ, ನವದೆಹಲಿಯಿಂದ ಏರ್ಪಡಿಸಲಾಗಿದ್ದ ‘ ಲೋಕಲೈಸೇಷನ್ ಆಫ್ ಸಸ್ಟೈನಬಲ್ ಡೆವೆಲಪ್‍ಮೆಂಟ್ ಗೋಲ್ಸ್-ರೋಲ್ ಆಫ್ ಪಂಚಾಯತ್ಸ್ ಇನ್ ಬ್ರಿಂಗಿಂಗ್ ಝೀರೋ ಹಂಗರ್’ ವಿಷಯ ಕುರಿತು ರಾಷ್ಟ್ರೀಯ ವೆಬಿನಾರ್‍ನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಗಿರಿರಾಜ್ ಸಿಂಹ ಉದ್ಘಾಟಿಸಿದರು.
ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡ, ಜಿ.ಪಂ.ಸಿಇಓ ಎಂ.ಎಲ್.ವೈಶಾಲಿ, ಇತರೆ ಅಧಿಕಾರಿಗಳು ಹಾಗೂ ಇತರೆ ರಾಜ್ಯಗಳ ಪಂಚಾಯತ್ ರಾಜ್ ಮಂತ್ರಿಗಳು, ಅಧಿಕಾರಿಗಳು ವೆಬಿನಾರ್‍ನಲ್ಲಿ ಪಾಲ್ಗೊಂಡು ದೇಶದಲ್ಲಿ ಶೂನ್ಯ ಹಸಿವು ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ ಚರ್ಚಿಸಿದರು.
“ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಿರಿಯರಾದ ಮಹಾತ್ಮಾ ಗಾಂಧೀಜಿ, ಲೋಹಿಯಾ, ದೀನ ದಯಾಳ ಉಪಾಧ್ಯಾಯರಂತಹವರ ಕನಾಸದ ಹಸಿವುಮುಕ್ತ ದೇಶವಾಗಿಸುವ ನಿಟ್ಟಿನಲ್ಲಿ ಪಂಚಾಯತ್‍ಗಳ ಪಾತ್ರದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೂನ್ಯ ಹಸಿವು ಗುರಿ ಸಾಧಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಮಹತ್ವದಾಗಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಜಾಬ್ ಕಾರ್ಡ್ ನೀಡಿ ಉದ್ಯೋಗ, ಡಿಬಿಟಿ ಮೂಲಕ ನೇರವಾಗಿ ಖಾತೆಗೆ ಹಣ ಜಮಾವಣೆಯ ಮೂಲಕ ಆಥಿರ್ಕ ಪಾರದರ್ಶತೆ ಸಾಧಿಸಲಾಗಿದೆ. ಹಾಗೂ ಸರ್ಕಾರದ ಎಲ್ಲ ಯೋಜನೆಗಳು ಮತ್ತು ಸೌಲಭ್ಯಗಳನ್ನು ಡಿಬಿಟಿ ಮೂಲಕ ಹಣ ಜಮಾವಣೆ ಮಾಡಲಾಗುತ್ತಿದ್ದು ಆರ್ಥಿಕವಾಗಿ ಪಾರದರ್ಶಕತೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ.”
“ವಿಶ್ವದಲ್ಲಿ ಏಷಿಯಾ ಖಂಡದಲ್ಲೇ ಹಸಿವಿನ ಸಮಸ್ಯೆ ಹೆಚ್ಚಾಗಿದ್ದು 10 ರಲ್ಲಿ ಒಬ್ಬರಿಗೆ ಪೌಷ್ಟಿಕ ಆಹಾರದ ಕೊರತೆ ಇದೆ. ಆದ ಕಾರಣ ದೇಶದ ಕಟ್ಟಕಡೆಯ ವ್ಯಕ್ತಿಗೂ ಕೂಡ ಪೌಷ್ಟಿಕ ಆಹಾರ ದೊರಕಿಸುವ ಮೂಲಕ ಹಸಿವು ಶೂನ್ಯ ದೇಶವಾಗಿಸುವ ನಿಟ್ಟಿನಲ್ಲಿ ಸರ್ಕಾರ ಗರೀಬ್ ಕಲ್ಯಾಣ ಯೋಜನೆ, ಒಂದು ದೇಶ ಒಂದು ಪಡಿತರ ಚೀಟಿ, ನರೇಗಾ, ಶಾಲೆ, ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ಕಾರ್ಯಕ್ರಮ, ಮಹಿಳಾ ಸಶಕ್ತೀಕರಣಕ್ಕೆ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಜಲ ಜೀವನ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರು, ಸಡಕ್ ಯೋಜನೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಮೂಲಭೂತ ಸೌಕರ್ಯ ವೃದ್ದಿ ಮತ್ತು ಹಸಿವು ಮುಕ್ತಗೊಳಿಸುವುದಕ್ಕೆ ಸರ್ಕಾರ ಸಂಕಲ್ಪ ಮಾಡಿ ಅನುಷ್ಟಾನಗೊಳಿಸುತ್ತಿದೆ. ಸ್ಥಳೀಯ ಆಡಳಿತ ಒಂದು ಶಕ್ತಿಯಾಗಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತಮ ಸಹಕಾರದಿಂದ ಇದನ್ನು ಇನ್ನಷ್ಟು ಸಶಕ್ತಗೊಳಿಸಬೇಕು. ಹಾಗೂ ಕೇಂದ್ರ ಮತ್ತು ರಾಜ್ಯದ ಎಲ್ಲ ಇಲಾಖೆಗಳು ಒಟ್ಟಾಗಿ ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ ದೇಶವನ್ನು ಹಸಿವುಮುಕ್ತಗೊಳಿಸಬೇಕೆಂದು ಕರೆ ನೀಡಿದರು.”
ಗಿರಿರಾಜ್ ಸಿಂಹ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ.
ಇದನ್ನು ಒದಿ : https://cnewstv.in/?p=5559
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments