Breaking News

ಅದ್ದೂರಿ ಓಣಂ ಹಬ್ಬ ಆಚರಣೆ

Cnewstv.in / 21.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಐಶ್ವರ್ಯ, ಸಮೃದ್ಧಿ ಹಬ್ಬವಾದ 9ನೇ ದಿನವನ್ನು ತಿರು ಓಣಂ ಎಂದು ಕರೆಯಲಾಗುತ್ತದೆ. ಓಣಂ ಹಬ್ಬದಲ್ಲಿ ಮಹಿಳೆಯರು ಹೂವಿನಿಂದಲೇ ರಂಗೋಲಿ ಬಿಡಿಸಿ, ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳದ ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ. ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಾಗರದ  ಶ್ರೀನಗರದ ಬಡಾವಣೆಯಲ್ಲಿ ಪತ್ರಕರ್ತ ಎಂ ಜಿ ರಾಘವನ್ ಅವರ ಮನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ.

ಓಣಂ ಹಬ್ಬದಲ್ಲಿ ಊಟ ಕೂಡ ಬಹಳ ವಿಶೇಷವಾಗಿರುತ್ತದೆ. ಓಣಸಡ್ಯ ಎಂಬುದೂ ತಿರು-ಓಣಂ ದಿನ ಮಾಡುವ ವಿಶೇಷ ಊಟವಾಗಿದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ಇನ್ನೂ ನಾನಾ ರೀತಿಯ ಸಿಹಿ ತಿಂಡಿ, ಕೇರಳದ ಸಾಂಪ್ರದಾಯಿಕ ಆದರೆ ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗ ಇರುವುದರಿಂದ ಅದ್ದೂರಿಯಾಗಿ ಆಚರಿಸಲು ಆಗುತ್ತಿಲ್ಲವೆಂದು ಸಾಗರದ ಶ್ರೀನಗರ ನಿವಾಸಿ ಶರಣ್ಯ ಆರ್ ನಾಯರ್ ಅವರು ಹೇಳಿದರು.

-ಸೂರಜ್ ನಾಯರ್

ಇದನ್ನು ಒದಿ : https://cnewstv.in/?p=5538

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*