Cnewstv.in / 08.08.2021 / New Delhi / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ಸ್ ಡೋಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ.
ಭಾರತೀಯ ಔಷಧ ಮಹಾನಿರ್ದೇಶನಕ್ಕೆ ಅಮೆರಿಕ ಮೂಲದ ಕಂಪನಿಯು ತಮ್ಮ ಲಸಿಕೆಯ ಬಳಕೆಗೆ ಒಪ್ಪಿಗೆ ನೀಡುವಂತೆ ಅರ್ಜಿ ಸಲ್ಲಿಸಿತ್ತು. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ವರದಿ ಆಧರಿಸಿ ಸಿಂಗಲ್ಸ್ ಕ್ಲಾಸಿಗೆ ಗೆ ಅನುಮತಿ ನೀಡಲಾಗಿದೆ.
ಭಾರತದಲ್ಲಿ ಈಗಾಗಲೇ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪೂಟ್ನಿಕ್, ಮಾಡೆನಾ ಲಸಿಕೆಗೆ ಒಪ್ಪಿಗೆ ದೊರೆತಿತ್ತು. ಇದೀಗ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಗೂ ಸಹ ಒಪ್ಪಿಗೆ ದೊರೆತಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಐದು ಲಸಿಕೆಗಳ ಬಳಕೆಗೆ ಒಪ್ಪಿಗೆ ಸಿಕ್ಕಿದಂತಾಗಿದೆ.
ದೇಶಾದ್ಯಂತ ಲಸಿಕಾ ವಿತರಣಾ ಪ್ರಕ್ರಿಯೆಯು ತೀವ್ರಗೊಂಡಿದ್ದು ಜುಲೈ ತಿಂಗಳಿನಲ್ಲಿ ಒಟ್ಟಾರೆ 13.45 ಕೋಟಿ ಡೋಸ್ ಗಳನ್ನು ನೀಡಲಾಗಿದೆ.
ಇದನ್ನು ಓದಿ : https://cnewstv.in/?p=5358
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments