Cnewstv.in / 23.07.2021 / New Delhi / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊಸದಿಲ್ಲಿ: ತನ್ನದೇ ಆದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಾರ್ಯತಂತ್ರ ರೂಪಿಸಿದ್ದು, ಸದ್ಯದಲ್ಲೇ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾಹಿತಿಯನ್ನು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ. ರವಿಶಂಕರ್ ಹೇಳಿದ್ದಾರೆ.
“ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(ಸಿಬಿಡಿಸಿ) ಪರಿಕಲ್ಪನೆಯು ಶೀಘ್ರವೇ ಸಾಕಾರಗೊಳ್ಳಲಿದ್ದು, ಜಗತ್ತಿನ ಹಲವು ಕೇಂದ್ರ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿವೆ ಎಂದೂ ಅವರು ತಿಳಿಸಿದ್ದಾರೆ. ಸದ್ಯ ಇರುವ ವರ್ಚುವಲ್ ಕರೆನ್ಸಿಗಳಿಗೆ “ಖಾತ್ರಿ’ಯಿಲ್ಲದ ಕಾರಣ, ಗ್ರಾಹಕರಿಗೆ ಸುರಕ್ಷತೆ ಒದಗಿಸಲು ಸಿಬಿಡಿಸಿಯನ್ನು ಪರಿಚಯಿಸಬೇಕಾದ ಅಗತ್ಯವಿದೆ. ಡಿಜಿಟಲ್ ಕರೆನ್ಸಿಯನ್ನು ಜಾರಿ ಮಾಡಿದರೆ, ನಗದು ಮೇಲಿನ ಅವಲಂಬನೆ ಕಡಿಮೆಯಾಗುತ್ತದಲ್ಲದೇ ವಹಿವಾಟು ವೆಚ್ಚವೂ ತಗ್ಗುತ್ತದೆ. ಆದರೆ ಇಲ್ಲೂ ಕೆಲವು ರಿಸ್ಕ್ಗಳಿದ್ದು, ಅವುಗಳನ್ನು ಜಾಗರೂಕವಾಗಿ ನಿಭಾಯಿಸಬೇಕಾಗುತ್ತದೆ”
ಟಿ. ರವಿಶಂಕರ್, ಆರ್‌ಬಿಐ ಡೆಪ್ಯುಟಿ ಗವರ್ನರ್.
ಇದನ್ನು ಓದಿ : https://cnewstv.in/?p=5195
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments