Cnewstv.in / 14.07.2021 / Mumbai / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ವಹಿಸಿಕೊಳ್ಳುವುದು ಮೂಲಕ ಅದಾನಿ ಗ್ರೂಪ್ ಭಾರತದ ಅತಿ ದೊಡ್ಡ ಏರ್ ಪೋರ್ಟ್ ನಿರ್ವಾಹಕ ಸಂಸ್ಥೆಯಾಗಿದೆ. ಜಿವಿಕೆ ಗ್ರೂಪ್ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ಅದಾನಿ ಗ್ರೂಪ್ ತನ್ನ ವಶಕ್ಕೆ ತೆಗೆದುಕೊಂಡಿದೆ
ಮುಂಬೈ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ನ ಶೇ. 74ರಷ್ಟು ಶೇರುಗಳನ್ನು ಅದಾನಿ ಗ್ರೂಪ್ ನ ಅಂಗಸಂಸ್ಥೆ ಆದಾನಿ ಏರ್ ರ್ಪೋರ್ಟ್ ಹೋಲ್ಡಿಂಗ್ಸ್ ತನ್ನದಾಗಿಸಿಕೊಂಡಿದೆ. ಈ ಮೂಲಕ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನ ಅದಾನಿ ಗ್ರೂಪ್ ವಹಿಸಿಕೊಂಡಿದೆ. ಇನ್ನು ಉಳಿದ ಶೇ. 26ರಷ್ಟು ಶೇರುಗಳನ್ನು ಭಾರತೀಯ ವಿಮಾನ ಪ್ರಾಧಿಕಾರ ಉಳಿಸಿಕೊಂಡಿದೆ.
ಲಖನೌ, ಅಹಮದಾಬಾದ್, ಮಂಗಳೂರು, ಜೈಪುರ್ ತಿರುವನಂತಪುರಂ ಗುವಾಹಟಿ ವಿಮಾನ ನಿಲ್ದಾಣಗಳನ್ನು ಆಧಾರ ಗ್ರೂಪ್ ನಿರ್ವಹಿಸುತ್ತಿದೆ. ಇದೀಗ ಮುಂಬೈ ವಿಮಾನ ನಿಲ್ದಾಣ ಕೂಡಾ ಹೊಸದಾಗಿ ಸೇರ್ಪಡೆಯಾಗಿದೆ.
ಇದನ್ನು ಓದಿ : https://cnewstv.in/?p=5132
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments