Cnewstv.in / 30.06.2021 / Odisha / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಒಡಿಶಾ : ಒಡಿಶಾದ ಕಟಕ್ ನಲ್ಲಿ ಅತ್ಯಂತ ದೊಡ್ಡ ಸೈಬರ್ ಕ್ರೈಮ್ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಇಬ್ಬರೂ ಸರ್ವಿಸ್ ಪ್ರೊವೈಡರ್ ಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 16000 ನಕಲಿ ಸಿಮ್ ಕಾರ್ಡ್ ಹಾಗೂ ಸಾವಿರಾರು ಸೆಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಕಲಿ ಐಡಿ ಕಾರ್ಡ್ ಗಳನ್ನು ಬಳಸಿ ಹೊರರಾಜ್ಯಕ್ಕೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಎಲ್ಲಾ ದಾಖಲಾತಿಗಳು ಸರಿ ಇದ್ದಾಗ ಮಾತ್ರ ಸರ್ವಿಸ್ ಪ್ರೊವೈಡರ್ ಗಳು ಸಿಮ್ ಕಾರ್ಡ್ ನನ್ನು ಆಕ್ಟಿವ್ ಮಾಡಲಾಗುತ್ತದೆ. ಆದರೆ ಆರೋಪಿಗಳು ಮೊದಲೇ ಆಕ್ಟಿವ್ ಮಾಡಿದ್ದ ಸಿಮ್ ಕಾರ್ಡುಗಳನ್ನು ಬಳಸುತ್ತಿದ್ದರು ಆದುದರಿಂದ ಅವುಗಳನ್ನು ಪತ್ತೆಹಚ್ಚಲು ಆಗುತ್ತಿರಲಿಲ್ಲ ಎಂದು ಭುವನೇಶ್ವರ್ ಕಟಕ್ ಪೊಲೀಸ್ ಕಮಿಷನರ್ ಎಸ್ ಕೆ ಪ್ರಿಯದರ್ಶಿ ಅವರು ಮಾಧ್ಯಮದವರೇ ತಿಳಿಸಿದ್ದಾರೆ.
ಇದನ್ನು ಓದಿ : https://cnewstv.in/?p=5045
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments