ಅಂಗನವಾಡಿ ಟೀಚರ್ ಯಿಂದ ಆಹಾರ ಕದ್ದು ಸಾಗಾಟ, ಸ್ಥಳಕ್ಕೆ ಅಧಿಕಾರಿಗಳು ಭೇಟಿ

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಬಿಳಚಿಯ ಎಕೆ ಕಾಲೋನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಕ್ರಮವಾಗಿ ಪಡಿತರವನ್ನು ಸಾಗಿಸುವಾಗ ಕಾಲೋನಿಯ ಮಹಿಳೆಯರು ಪಡಿತರ ಸಮೇತ ಕಾರ್ಯಕರ್ತೆಯನ್ನು ಹಿಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಜಿಲ್ಲಾ ಉಪನಿದೇರ್ಶಕಿ ಭಾರತಿ ಬಣಕಾರ್ ನೇತೃತ್ವದ ತಂಡ ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ತಟ್ಟೆಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆ ಪಡಿತರವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪದಾರ್ಥಗಳನ್ನು ಬೈಕಿನಲ್ಲಿ ಸಾಗಿಸುವಾಗ ವ್ಯಕ್ತಿಯನ್ನು ಅಡ್ಡಗಟ್ಟಿದ ಸ್ಥಳೀಯ ಮಹಿಳೆಯರು ವಸ್ತುಗಳನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ಮೇಲ್ವಿಚಾರಕಿ ಕವಿತಾ ಹಾಗೂ ಸಿಡಿಪಿಒ ರವಿಕುಮಾರ್ ಎದುರು ಕಾರ್ಯಕರ್ತೆಗೆ ಆನೇಕ ಬಾರಿ ಬುದ್ದಿ ಹೇಳಿದರು ತಿದ್ದಿಕೊಳ್ಳದ ಅಂಗನವಾಡಿ ಕಾರ್ಯಕರ್ತೆ ವರ್ತನೆ ಕಂಡು ಅಧಿಕಾರಿಗಳೆದರು ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕೂಡಲೆ ಕಾರ್ಯಕರ್ತೆಯನ್ನು ಕೆಲಸದಿಂದ ವಜಾಗೊಳಿಸಿದರು ಎಂದು ಸ್ಥಳೀಯರು ಒತ್ತಾಯಿಸಿದರು. ಜಿಲ್ಲಾ ಉಪನಿರ್ದೇಶಕಿ ಭಾರತಿ ಬಣಕಾರ್ ಬಳಿ ಕಾರ್ಯಕರ್ತೆ ವಿರುದ್ಧ ಹತ್ತಾರು ದೂರು ನೀಡಿದರು. ಗ್ರಾಮಸ್ಥರ ಬೇಡಿಕೆಯಂತೆ ಕಾಲೋನಿಯ ಕೇಂದ್ರಕ್ಕೆ ತಾತ್ಕಾಲಿವಾಗಿ ಬೇರೊಬ್ಬರನ್ನು ಕಳಿಸುವ ಬಗ್ಗೆ ಗ್ರಾಮಸ್ಥರಿಗೆ ಅಧಿಕಾರಿಗಳು ಭರವಸೆ ನೀಡಿದರು.
ಸುದ್ದ ಹಾಗೂ ಮಾಹಿತಿಗಾಗಿ
ಸಂಪರ್ಕಿಸಿ 9916660399
C News TV Kannada News Online in cnewstv