ಶಿವಮೊಗ್ಗ : ತಾಯಿಯ ಶವದೊಂದಿಗೆ ಒಂದು ವಾರಗಳನ್ನು ಮಾನಸಿಕ ಅಸ್ವಸ್ಥ ಮಗಳು ಕಳೆದ ಘಟನೆ ಶಿವಮೊಗ್ಗದ ಬಸವನಗುಡಿ 5 ನೇ ತಿರುವಿನ ಮನೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಮನೆಯಲ್ಲಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಮೃತಪಟ್ಟಿದರೆ. ತಾಯಿ ಮೃತ ದೇಹ ಕೊಳೆತು ದುರ್ವಾಸನೆ ಬರುತ್ತಿದ್ದರೂ ತಾಯಿಯ ಶವದೊಂದಿಗೆ ಒಂದು ವಾರ ಕಳೆದಿದ್ದಾಳೆ ಮಾನಸಿಕ ಅಸ್ವಸ್ಥ ಮಗಳು ಶಾಂಭವಿ.
ಮನೆಯಿಂದ ದುರ್ವಾಸನೆ ಬರುವುದನ್ನು ತಡೆಯಲಾರದೆ ಜಯನಗರ ಪೊಲೀಸ್ ಠಾಣೆಗೆ ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದರು. ಜಯನಗರ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
C News TV Kannada News Online in cnewstv