ಮಧ್ಯಮವರ್ಗದವರು ನಿರೀಕ್ಷೆ ಮಾಡುತ್ತಿದ್ದಂತಹ ತೆರಿಗೆ ವಿನಾಯ್ತಿಯನ್ನು 2.50 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಇದರಿಂದ ಸುಮಾರು 3 ಕೋಟಿ ತೆರಿಗೆ ಪಾವತಿದಾರರು ಇದರ ಉಪಯೋಗವನ್ನು ಪಡೆಯಲಿದ್ದರೆ, ಈ ತೆರಿಗೆ ವಿನಾಯ್ತಿ ಯಿಂದ ಸರ್ಕಾರದ ಬೊಕ್ಕಸಕ್ಕೆ 5000 ಕೋಟಿ ಹೊರೆಯಾಗಲಿದೆ.
ಗೃಹ ಸಾಲಕ್ಕೆ 2 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ.
40 ಸಾವಿರದ ವರೆಗೆ ಬಡ್ಡಿ ಆದಾಯ ತೆರಿಗೆಯನ್ನು ನೀಡುವಂತಿಲ್ಲ.
2.4 ಲಕ್ಷದವರೆಗೆ ಮನೆ ಬಾಡಿಗೆ ಆದಾಯದ ಮೇಲೆ ತೆರಿಗೆ ವಿನಾಯಿತಿ.
ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.
ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ.
ತೆರಿಗೆದಾರ 2 ಕೋಟಿ ತನಕ ಆದಾಯವುಳ್ಳವರಿಗೆ ಎರಡು ಮನೆ ಮೇಲಿನ ಹೂಡಿಕೆಯನ್ನು ತೆರಿಗೆ ವಿನಾಯಿತಿಗೆ ಸಿಗಲಿದೆ.
5 ಲಕ್ಷ ರು ನಿಂದ 10 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 5ಕ್ಕೆ ಇಳಿಕೆ.
50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಚಾರ್ಜ್
ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.
Recent Comments