ಶ್ರೀಹರಿಕೋಟ: ಇಸ್ರೋ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಈ ಉಪಗ್ರಹ ಉಡಾವಣೆಯಿಂದ ಜಿಎಸ್ಎಲ್ ವಿ ಎಂಕೆ III ವೆಹಿಕಲ್ ಪ್ರೋಗ್ರಾಂ ಸಹ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಪ್ರಾರಂಭವಾಗಲಿದೆ. ಇದೇ ಮಾದರಿಯ ಉಪಗ್ರಹವನ್ನು ಚಂದ್ರಯಾನ-2 ಕ್ಕೂ ಬಳಕೆ ಮಾಡುವುದರಿಂದ ಈ ಉಪಗ್ರಹ ಉಡಾವಣೆ ಮಹತ್ವ ಪಡೆದುಕೊಂಡಿತ್ತು. ಸೆಟಲೈಟ್ ಲಾಂಚ್ ವೆಹಿಕಲ್(ಉSಐಗಿ-mಞ III) 43.4 ಮೀಟರ್ ಎತ್ತರವಿದ್ದು, 640 ಟನ್ ಭಾರ ಹೊಂದಿದೆ. ಇದು ಹತ್ತು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗಿದೆ.
ಸಂಗ್ರಹ
Recent Comments