ಒಬ್ಬ ವ್ಯಕ್ತಿಯ ಸಾಮರ್ಥ್ಯ ಅಥವಾ ದೌರ್ಭಲ್ಯ ಎನ್ನುವುದು ಕೇವಲ ಲಿಂಗನೆಲೆಗೆ ಸೇರಿದ್ದಲ್ಲ ವೈಯಕ್ತಿಕವಾದುದು.ಸ್ತ್ರೀಪುರುಷರ ನಡುವೆ ಜೈವಿಕಭಿನ್ನತೆ ಇದೆ ನಿಜ ಅದು ನೈಸರ್ಗಿಕವಾದುದು.ಸಾಂಸ್ಕ್ರತಿಕ ಹೇರಿಕೆಯಾಗಿ ಮಾಡಿದ್ದು ಸಮಾಜ.ಸ್ತ್ರೀಸಮಾನತೆಯ ಹೋರಾಟಕ್ಕೆ ಸಂದ ಜಯ ಕೋರ್ಟ್ ತೀರ್ಪು ಹೊರತು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕಲ್ಲ.ಮುಟ್ಟಾಗದೆ ಹುಟ್ಟಾಗಲಾರದು ಎಂಬ ಪವಿತ್ರ ಕಲ್ಪನೆಯಿದ್ದರೆ ಕೋರ್ಟ್ ತೀರ್ಮಾನವನ್ನು ಅಲ್ಲಗಳೆಯುತ್ತಿರಲಿಲ್ಲವೇನೊ……. ..ಋತುಚಕ್ರ, ಇನ್ನಿತರೆ ಅಸಹಾಯಕ ಸ್ಥಿತಿ ಗಳಕಾರಣವೊಡ್ಡಿ,ಸರ್ಕಾರ ಅವಕಾಶ ಮಾಡಿ ಕೊಟ್ಟರೂ ಆಚರಣೆಗಳ ಧಿಕ್ಕರಿಸಿ ಪ್ರವೇಶಿಸುವ ಧೈರ್ಯ ಆಕೆಯೇ ಮಾಡಲಾರಳು.ಅಷ್ಟಕ್ಕೂ ದೇವಸ್ಥಾನ ಪ್ರವೇಶ ಆಕೆಯ ವೈಯಕ್ತಿಕ ಮನಸ್ಥಿತಿ ಬೇಡವೆನ್ನುವುದು ಸಮಂಜಸವಲ್ಲ.ನಮ್ಮ ಆಲೋಚನೆಗಳ ಆಧ್ಯತೆ ಬದಲಾಗಬೇಕು ,ದೇವಸ್ಥಾನ ಮಹಿಳೆ ದೌರ್ಜನ್ಯ ಅಸಮಾನತೆ ಇವುಗಳ ಸುತ್ತಾ ಸುತ್ತುವುದನ್ನು ಬಿಟ್ಟು ಪರಿಸರ,ವಿಕೋಪ,ಬರುವ ಪೀಳಗೆಗೆ ನಾವೇನು ಕೊಡಬೇಕೆನ್ನುವುದರ ಉಳಿವು ಅಳಿವಿನ ಪರಿಜ್ಞಾನ,ಪರಿಹಾರದತ್ತ ಯಾಕೆ ಯೋಚಿಸಬಾರದು?
ಶೀಲಾಸುರೇಶ್
C News TV Kannada News Online in cnewstv