Breaking News

ದೆಹಲಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ.

Cnewstv / 15.11.2022 / ನವದೆಹಲಿ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ದೆಹಲಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ.

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯನ್ನೇ ಬೆಚ್ಚಿ ಬೀಳಿಸಿದಂತಹ ಕೊಲೆ ಪ್ರಕರಣ ನಡೆದಿದ್ದು, ಘಟನೆ ನಡೆದ 6 ತಿಂಗಳ ನಂತರ ಬೆಳಕಿಗೆ ಬಂದಿದೆ.

ಶ್ರದ್ದಾ (28) ಕೊಲೆಯಾದ ಯುವತಿ. ಮುಂಬೈನ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮುಂಬೈನಲ್ಲಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಎಂಬ ಯುವಕನನ್ನು ಭೇಟಿಯಾಗಿದ್ದಳು ನಂತರ ಆ ಸ್ನೇಹ ಪ್ರೀತಿಯಾಗಿ, ಮೂರು ವರ್ಷಗಳಿಂದ ಲಿವಿಂಗ್ ಸಂಬಂಧದಲ್ಲಿದ್ದರು. ಮನೆಯವರು ಅದಕ್ಕೆ ಒಪ್ಪದೇ ಇದ್ದಾಗ ಮುಂಬೈನಿಂದ ದೆಹಲಿಗೆ ಹೋಗಿ ಒಂದು ಪ್ಲಾಟ್ ನಲ್ಲಿ ವಾಸವಾಗಿದ್ದರು.

ಕಾಲುವೆಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರು ಪಾಲು.

ಸಂಪ್ರದಾಯಸ್ಥ ಹಿಂದೂ ಮನೆತನದವರಾದ ಶ್ರದ್ದಾಳ ತಂದೆ ತಾಯಿ ಇವರ ಮದುವೆಗೆ ಒಪ್ಪಲಿಲ್ಲ. ಅಂತರ್ಜಾತಿ ಧರ್ಮ ಮದುವೆಯನ್ನು ಮಾಡಿಕೊಂಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇವರಿಬ್ಬರ ಮದುವೆಗೆ ಶ್ರದ್ದಾ ಮನೆಯವರು ಒಪ್ಪದೇ ಇದ್ದಾಗ. ಅಫ್ತಾಬ್ ಗೆ ಮದುವೆಯಾಗುವಂತೆ ಶ್ರದ್ದಾ ಒತ್ತಡ ಮಾಡಿದ್ದಾಳೆ, ಇದೇ ವಿಚಾರವಾಗಿ ಇವರಿಬ್ಬರ ನಡುವೆ ಜಗಳವಾಗಿದ್ದು, ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದೆಹಲಿಯ ಸುತ್ತಮುತ್ತ ಸ್ಥಳಗಳಲ್ಲಿ ಬಿಸಾಡಿ ಬಂದಿದ್ದಾನೆ.

18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದು ಮನೆಯಲ್ಲಿ ವಾಸನೆ ಬಾರದ ಹಾಗೆ ರೂಮ್ ಫ್ರೆಶ್ನರ್ ಹಾಗೂ ಅಗರ ಬತ್ತಿಯನ್ನ ಉಪಯೋಗಿಸಿದ್ದಾನೆ. 18 ದಿನಗಳ ಕಾಲ ಶವದ ತುಂಡುಗಳನ್ನು ರಾತ್ರಿ 12 ಗಂಟೆ ನಂತರ ಮನೆಯಿಂದ ಹೊರಗೆ ಹೋಗಿ ಬಿಸಾಡುತ್ತಿದ್ದನು.

ಅಕ್ಕನ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ ತಮ್ಮ, ಮನನೊಂದು ಯುವತಿ ಆತ್ಮಹತ್ಯೆ.

ಶವವನ್ನು ತುಂಡು ತುಂಡಾಗಿ ಬೇರೆ ಬೇರೆ ಜಾಗಗಳಲ್ಲಿ ಹಾಕುವುದರಿಂದ ಕೊಲೆಯ ವಿಚಾರ ಹೊರಗೆ ಬರುವುದಿಲ್ಲ ಎಂದು ತಿಳಿದುಕೊಂಡಿದ್ದ ಆದರೆ ಕೊಲೆಯಾದ ಆರು ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದ್ದು ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*