Breaking News

ಅಕ್ಕನ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ ತಮ್ಮ, ಮನನೊಂದು ಯುವತಿ ಆತ್ಮಹತ್ಯೆ.

Cnewstv / 12.11.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಕ್ಕನ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ ತಮ್ಮ, ಮನನೊಂದು ಯುವತಿ ಆತ್ಮಹತ್ಯೆ.

ಬೆಂಗಳೂರು : ಮೊಬೈಲ್ ಪಾಸ್ ವರ್ಡ್ ಬದಲಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ ನಡೆದಿದೆ.

ವಿದ್ಯುತ್ ಬಿಲ್ ಬಾಕಿ ಇದೆ” ಸೈಬರ್ ವಂಚಕರ ಹೊಸ ಪ್ಲಾನ್.

ಪಿಯುಸಿ ಓದುತ್ತಿದ್ದ ರುಚಿತಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ದಳು. ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಇದರಿಂದ ಮನೆಯವರಿಗೆ ತುಂಬಾ ಕಿರಿಕಿರಿ ಉಂಟಾಗಿತ್ತು. ಇದು ಹೀಗೆ ಮುಂದುವರೆದರೆ ಸಮಸ್ಯೆ ಎದುರಾಗಬಹುದು, ಮೊಬೈಲ್ ಬಳಕೆಯಿಂದ ದೂರ ಮಾಡುವ ಉದ್ದೇಶದಿಂದ ರುಚಿತಾ ತಮ್ಮ ಮೊಬೈಲ್ ಗೆ ಪಾಸ್ ವರ್ಡ್ ಬದಲಾಯಿಸಿದ್ದಾನೆ.

ಇದೆ ವಿಚಾರಕ್ಕೆ ಅಕ್ಕ- ತಮ್ಮನ ಮಧ್ಯೆ ಗಲಾಟೆ ಶುರುವಾಗಿದೆ. ಈ ಗಲಾಟೆಯಿಂದ ಯುವತಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಘಟನೆ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಒದಿ : http://cnewstv.in/?p=11384

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*