Breaking News

ಮೋದಿ ಭದ್ರತೆಗೆ ಮುಧೋಳ ಶ್ವಾನ.

Cnewstv.in / 18.08.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮೋದಿ ಭದ್ರತೆಗೆ ಮುಧೋಳ ಶ್ವಾನ.

ಬೆಂಗಳೂರು : ಭಾರತೀಯ ಸೇನೆಯ ಗಡಿಯಲ್ಲಿ ಉಗ್ರರ ನುಸುಳುವಿಕೆ ಪತ್ತೆಗಾಗಿ ಆಯ್ಕೆಯಾಗಿರುವ ವಿಶಿಷ್ಟ ತಳಿಯ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ ಆಯ್ಕೆಯಾಗಿದ್ದಾರೆ.

ತೆಳ್ಳನೆಯ ದೇಹ, ಚೂಪಾದ ಮೂಗು, ಚಾಣಾಕ್ಷತನ, ಚಿಗರೆಯಂತ ಓಟದಿಂದ ಪ್ರಸಿದ್ಧಿ ಪಡೆದಿರುವ ಮುಧೋಳ ನಾಯಿ ದೇಶದ ಪ್ರಧಾನಿಯ ಭದ್ರತೆಗೆ ಸೇರ್ಪಡೆಯಾಗಿರೋದು ಕರ್ನಾಟಕವೇ ಹೆಮ್ಮೆ ಪಡೋ ವಿಚಾರ. ಈ ಹಿಂದೆ ರಾಜ್ಯ ಪೊಲೀಸ್ ಇಲಾಖೆ, ಸಶಸ್ತ್ರ ಸೇನಾ ಪಡೆ, ಸಿಆರ್ ಪಿಎಫ್, ಮಿಲಿಟರಿ ಸೇರಿದಂತೆ ವಿವಿಧ ರಕ್ಷಣಾ ಸಾಧನ ಮುಧೋಳ ನಾಯಿ ಸೇರ್ಪಡೆಯಾಗಿತ್ತು. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|ಸುಶಾಂತ ಹಂಡಗೆ ಈ ವಿಷಯವನ್ನು ದೃಢಪಡಿಸಿದ್ದು, ಮುಧೋಳ ತಳಿಯ ಎರಡು ತಿಂಗಳ ವಯಸ್ಸಿನ ಎರಡು ಶ್ವಾನ ಮರಿಗಳನ್ನು ಎನ್‌ಎಸ್‌ಎಸ್‌ಜಿ ಪಡೆಗೆ ಹಸ್ತಾಂತರಿಸಲಾಗಿದೆ.

ಮುಧೋಳ ಶ್ವಾನದ ವಿಶೇಷತೆ..

* ಭಾರತದ ದೇಶೀಯ ತಳಿ ಹಾಗೂ ವಿದೇಶಿ ತಳಿಯ ಶ್ವಾನಗಳಿಗೆ ಮುಧೋಳ ಶ್ವಾನ ಹಲವು ವಿಶೇಷತೆಗಳಿವೆ.

* ಭಾರತೀಯ ಸೇನೆ, ಸಿಆರ್ ಪಿಎಫ್ ಮತ್ತು ವಾಯುಸೇನೆಗೂ ಈ ಮುಧೋಳ ನಾಯಿ ಸೇರ್ಪಡೆಗೊಂಡು ಗಮನ ಸೆಳೆದವು.

* ಅತ್ಯಂತ ತೆಳುವಾದ ಮೈಕಟ್ಟು (ಬೇರೆ ಶ್ವಾನಕ್ಕೆ ತೂಕದಲ್ಲಿ ಕಡಿಮೆ), ಗಂಟೆಗೆ 50 ಕಿಮೀ ಓಡಬಲ್ಲ, ಮೂರು ಕಿಮೀ ದೂರ (ಬೇರೆ ನಾಯಿಗಳು 1 ಕಿಮೀ ಮಾತ್ರ ಸಾಮರ್ಥ್ಯ) ಅದರಿಂದಲೇ ವಾಸನೆ ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ.

* ಬೇರೆ ಶ್ವಾನಗಳು 10 ರಿಂದ 12 ವರ್ಷ ಆಯುಷ್ಯ ಆಸ್ಪತ್ರೆ, ಮುಧೋಳ ಶ್ವಾನ 12 ರಿಂದ 15 ವರ್ಷ ಆಯುಷ್ಯ ಹೊಂದಿದೆ.

* ಮುಧೋಳ ನಾಯಿ ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳಬಹುದಾದ ಪ್ರಾಣಿ.

* ಈ ಮೂಢೋಳ ಶ್ವಾನವನ್ನು ಬೇಟೆಯಾಡಲು ಬಳಸಲಾಗಿದೆ. ಇಂತಹ ವಿಶಿಷ್ಟ ಶ್ವಾನ ಸಂತತಿ ಉಳಿಸಿ-ಬೆಳೆಸುವ ಉದ್ದೇಶದಿಂದಲೇ 2007-08ರಲ್ಲಿ ಮುಧೋಳದಲ್ಲಿ ಶ್ವಾನ ಸಂಶೋಧನೆ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಪ್ರಧಾನಿಯಿಂದ ಪ್ರಶಂಸೆ..

ಪ್ರಧಾನಿ ಮೋದಿ 2020 ರಲ್ಲಿ ಆಗಸ್ಟ್ 30 ರಂದು ನಡೆದಿದ್ದ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಈ ಮುಧೋಳ ಶ್ವಾನಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮುಧೋಳ ಶ್ವಾನಗಳನ್ನು ನೆನಪಿಸಿ, ಅವುಗಳ ವ್ಯಕ್ತಿತ್ವವನ್ನು ಬಣ್ಣಿಸಿ, ಆತ್ಮ ನಿರ್ಭರ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯಂತಹ ನಾಯಿಗಳನ್ನ ಸಾಕಿ ಎಂದಿದ್ದರು.

ಇದನ್ನು ಒದಿ : https://cnewstv.in/?p=10896

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*