ತ್ರಿವರ್ಣ ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ.
Cnewstv.in / 13.08.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತ್ರಿವರ್ಣ ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ’ದ ಮೂಲಕ ಪ್ರತಿ ಮನೆಯಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವೂ ಭರದಿಂದ ಸಾಗಿದೆ. ಅದರಂತೆ ಕೇಂದ್ರ ಸರ್ಕಾರ ಇಂದಿನಿಂದ ಆ.15ರ ವರೆಗೆ ಒಟ್ಟು ಮೂರು ದಿನ ಮನೆಗಳಲ್ಲಿ ಧ್ವಜ ಹಾರಿಸಲು ಅನುಮತಿ ನೀಡಲಾಗಿದೆ.
ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ.
* ಸಂಪೂರ್ಣ ಭಾರತದ ಧ್ವಜವು ಆಯತಾಕಾರದಲ್ಲಿರಬೇಕು.
* ಧ್ವಜವು ಯಾವುದೇ ಗಾತ್ರದಲ್ಲಿರದ್ದರೂ ಅದರ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿರಬೇಕು.
* ಧ್ವಜ ಹಾರಿಸುವಾಗ ಕೇಸರಿ ಬಣ್ಣ ಮೇಲಿರಬೇಕು. ಹಸಿರು ಬಣ್ಣ ಕೆಳಗಿರಬೇಕು. ಧ್ವಜ ತಲೆಕೆಳಗಾಗಿ ಅಂದರೆ ಹಸಿರು ಬಣ್ಣ ಮೇಲಿರುವಂತೆ, ಕೇಸರಿ ಬಣ್ಣ ಕೆಳಗೆ ಮಾಡಿ ಹಾರಿಸಬಾರದು.
* ರಾಷ್ಟ್ರ ಧ್ವಜ ಹಾರಾಡುವಾಗ ಎತ್ತರದಲ್ಲಿ ಬೇರಾವುದೇ ಧ್ವಜ ಹಾರಿಸಲಾಯಿತು.
* ತ್ರಿವರ್ಣ ಧ್ವಜವನ್ನು ಹಾರಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು.
* ಧ್ವಜ ಸಂಹಿತೆಯ ಪ್ರಕಾರ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಜನರಿಗೆ ಮಾತ್ರ ತ್ರಿವರ್ಣ ಧ್ವಜವನ್ನು ಧರಿಸಲು ಅವಕಾಶವಿದೆ.
* ಮನೆಯಲ್ಲಿ ರಾಷ್ಟ್ರಧ್ವಜ ಹಾರಸಿದಾಗ ಕಂಬ ಯಾವುದೇ ಬದಿಗೆ ವಾಲಿರಬಾರದು. ಧ್ವಜ ನೆಲಕ್ಕೆ ತಾಗಬಾರದು.
* ಧ್ವಜದ ಮೇಲೆ ಏನನ್ನೂ ಬರೆಯಲಾಗಿದೆ.
* ಧ್ವಜವನ್ನು ಮಡಚಲೂ ನಿಯಮವಿದೆ. ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾಕಾರದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.
ಇದನ್ನು ಒದಿ : https://cnewstv.in/?p=10812
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತ್ರಿವರ್ಣ ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ. 2022-08-13