Breaking News

ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ.

Cnewstv.in / 12.08.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ.

ಬೆಂಗಳೂರು : ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗಾಯಕ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ..

* ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ
1938 ರ ಡಿಸೆಂಬರ್ 14ರಂದು.

* ಶಿವಮೊಗ್ಗ ಸುಬ್ಬಣ್ಣ ಅವರ ಹುಟ್ಟು ಹೆಸರು ಜಿ. ಶ್ರೀಸುಬ್ರಹ್ಮಣ್ಯಂ.‌ ತಂದೆ ಗಣೇಶ ರಾವ್ ತಾಯಿ ರಂಗನಾಯಕಮ್ಮ.

* ಸಂಗೀತ ಘನ ವಿದ್ವಾಂಸರಾದ, ಅವರ ತಾತಾ ಶಾಮಯ್ಯರವರಿಂದ ಪ್ರಾಥಮಿಕ ಸಂಗೀತ ಅಭ್ಯಾಸವನ್ನು ಆರಂಭಿಸಿದ ಇವರು, ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಭಾಕರ್ ಅವರಿಂದ ಅಭ್ಯಾಸ ಮಾಡಿದರು. ನಂತರ ಕುವೆಂಪು-ಬೇಂದ್ರೆ ಸೇರಿದಂತೆ ಅನೇಕ ಕವಿಗಳ ಕವಿತೆಗೆ ರಾಗಸಂಯೋಜಿಸಿ ಹಾಡುವ ಮೂಲಕ ಹೆಸರಾದರು.

* 1963 ರಲ್ಲಿ ಆಕಾಶವಾಣಿಯ ಗಾಯಕರಾಗಿ ಆಯ್ಕೆಯಾದರು.

* ಚಂದ್ರಶೇಖರ ಕಂಬಾರರ ಕರಿಮಾಯಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸುಬ್ಬಣ್ಣ ಅವರು ಗಾಯಕರಾಗಿ ಪ್ರವೇಶಿಸಿದರು.

* ಬಿ.ಎ.‌ ಬಿ.ಕಾಂ. ಎಲ್ ಎಲ್ ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ 1982 ರಲ್ಲಿ‌ ಶಿವಮೊಗ್ಗದಿಂದ ಬೆಂಗಳೂರಿಗೆ ಪಯಣ ಆರಂಭಿಸಿದರು.‌

* 1979 ರಲ್ಲಿ ಕಾಡುಕುದುರೆ ಚಲನಚಿತ್ರದಲ್ಲಿ ಬರುವ “ಕಾಡು ಕುದುರೆ ಓಡಿಬಂದಿತ್ತಾ” ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಈ ಮೂಲಕ ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗಾಯಕ ಎನಿಸಿಕೊಂಡರು.

* ಆಕಾಶವಾಣಿ ಮತ್ತು ದೂರದರ್ಶನದಲ್ಲಿ A ಶ್ರೇಣಿಯ ಗಾಯಕರಾಗಿದ್ದರು.

* ಎರಡು ಬಾರಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.‌

ಪ್ರಶಸ್ತಿಗಳು..

*1979 ರಲ್ಲಿ ಕಾಡುಕುದುರೆ ಚಲನಚಿತ್ರದ ಹಾಡಿಗಾಗಿ ರಜತ ಕಮಲ ರಾಷ್ಟ್ರ ಪ್ರಶಸ್ತಿ ದೊರೆತಿದೆ.

* 1985 ರಲ್ಲಿ ರಾಜ್ಯೋತ್ಸವ ಪುರಸ್ಕಾರ.

* 1988 ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ.

* 1999 ಸಂತ ಶಿಶುನಾಳ ಶರೀಫರ ಪ್ರಶಸ್ತಿ.

*2003 ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ.

*2008 ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.

ಇದನ್ನು ಒದಿ : https://cnewstv.in/?p=10792

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*