Breaking News

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು.

Cnewstv.in / 22.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು.

ಭಾರತದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮ ರವರು ಆಯ್ಕೆಯಾಗಿದ್ದಾರೆ. ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಂವಿಧಾನದ ಹುದ್ದೆವರೆಗಿನ ಅವರ ಜೀವನ ಪಯಣದ ಕಿರು ನೋಟ.

* ದ್ರೌಪದಿ ಮುರ್ಮ ಜನಸಿದ್ದು 1958 ಜೂನ್ 20 ರಂದು ಒಡಿಶಾದ ಮಯೂರ್ ಗಂಜ್ ಜಿಲ್ಲೆಯ ಉಪಾರ್ ಬೆಡ ಎಂಬ ಹಳ್ಳಿಯಲ್ಲಿ.

* ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ಆದಿವಾಸಿ ಸಮುದಾಯಕ್ಕೆ ಸೇರಿದ ಇವರ ಅಜ್ಜ ಮತ್ತು ತಂದೆ ಇಬ್ಬರು ಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿದ್ದರು.

* ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭ ಮಾಡಿದರು.

* ಶ್ಯಾಮ್ ಚರಣ್ ಮುರ್ಮ ಎಂಬ ಬ್ಯಾಂಕ್ ಉದ್ಯೋಗಿಯೊಂದಿಗೆ ಮದುವೆ ಮಾಡಿಕೊಟ್ಟರು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು.

* ಪ್ರಾಧ್ಯಾಪಕಿಯಾಗಿದ್ದವರು ಮುಂದೆ ಜೂನಿಯರ್ ಅಸಿಸ್ಟೆಂಟ್ ಆಗಿ ನೀರಾವರಿ ಇಲಾಖೆಯಲ್ಲಿ ಸಲ್ಲಿಸಿದರು.

* 1997 ರಲ್ಲಿ ಬಿಜೆಪಿ ಸೇರ್ಪಡೆಯಾದ ಮುರ್ಮ ರಯ್ ರಂಗಾನಗರ ಪಂಚಾಯಿತಿಗೆ ಕನ್ಸಲರ್ ಆಗಿ ಆಯ್ಕೆಯಾದರು.

* 1997 ಅದೇ ವರ್ಷ ಬಿಜೆಪಿಯ ರಾಷ್ಟ್ರೀಯ ಎಸ್ ಟಿ ಮೋರ್ಚಾಕ್ಕೆ ಉಪಾಧ್ಯಕ್ಷೆಯಾಗಿ ನೇಮಕಗೊಂಡರು.

* 1997 ಅದೇ ವರ್ಷ ನಡೆದ ಓಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್ ರಂಗಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

* ವಾಣಿಜ್ಯ ಇಲಾಖೆಯ ಸ್ವತಂತ್ರ ಸಚಿವೆಯಾಗಿ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

* ರಾಜಕೀಯವಾಗಿ ಯಶಸ್ಸನ್ನು ಸಾಧಿಸುತ್ತಾ ಬರುತ್ತಿದ್ದರು ಸಹ ವೈಯಕ್ತಿಕ ಜೀವನದಲ್ಲಿ ನೋವು ಅನುಭವಿಸಿದರು. ಐದು ವರ್ಷಗಳಲ್ಲಿ ತಮ್ಮ ಕುಟುಂಬದ ಮೂವರನ್ನು ಕಳೆದುಕೊಂಡರು.

* 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು ಅದೇ ವರ್ಷ ತಮ್ಮ ಪುತ್ರ ಲಕ್ಷ್ಮಣನನ್ನು ಅನಿರೀಕ್ಷಿತವಾಗಿ ಕಳೆದುಕೊಂಡರು.

* 2013ರಲ್ಲಿ ತನ್ನ ಎರಡನೇ ಪುತ್ರನನ್ನು ಸಹ ಕಳೆದುಕೊಂಡರು, ಇದಾದ ಒಂದು ವರ್ಷದಲ್ಲಿ ತಮ್ಮ ಪತ್ನಿ ಶ್ಯಾಮ್ ನನ್ನು ಸಹ ಕಳೆದುಕೊಂಡರು.

* 2015 ರಲ್ಲಿ ಕೇಂದ್ರ ಸರ್ಕಾರ ಅವರನ್ನು ಜಾರ್ಖಂಡ ರಾಜ್ಯಪಾಲರಾಗಿ ನೇಮಿಸಿತು. ಈ ಮೂಲಕ ಬುಡಕಟ್ಟು ಜನಾಂಗದ ಮಹಿಳೆ ಮೊದಲ ಬಾರಿಗೆ ರಾಜ್ಯಪಾಲರ ಸ್ಥಾನ ಅಲಂಕರಿಸಿದರು.‌

* ರಾಷ್ಟ್ರಪತಿ ಚುನಾವಣೆಯಲ್ಲಿ ಮೂರು ಸುತ್ತಿನ ಮತ ಎಣಿಕೆ ನಂತರ ದ್ರೌಪದಿ ಮುಮು ಪಡೆದ ಮತಗಳ ಮೌಲ್ಯ 5,77,777 ಅಗಿದ್ದು, ಯಶವಂತ ಸಿನ್ದಾ ಪಡೆದ ಮತಗಳ ಮೌಲ್ಯ 2,61,062.

ಇದನ್ನು ಒದಿ : https://cnewstv.in/?p=10604

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*