24 ವರ್ಷಗಳ ನಂತರ ಅದ್ಧೂರಿಯಾಗಿ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ..
Cnewstv.in / 09.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
24 ವರ್ಷಗಳ ನಂತರ ಅದ್ಧೂರಿಯಾಗಿ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ..
ಹೊಳೆಹೊನ್ನೂರು : ಪಟ್ಟಣ ಸಮೀಪದ ಆನವೇರಿ ಗ್ರಾಮದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಪ್ರಯುಕ್ತ ಸಿಡಿ ಉತ್ಸವವು ಬುಧವಾರ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.
ಕೊಂಡಿ ಸಿಡಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಸಿಡಿ ಆಡುವ ವ್ರತಧಾರಿಗಳು ಪುಣ್ಯ ತೀರ್ಥ ಸ್ನಾನ ಮಾಡಿ ಮಡಿಯುಟ್ಟು ಕಟ್ಟುನಿಟ್ಟಿನ ಉಪವಾಸ ಹಾಗೂ ದೇವರ ಭಕ್ತಿ ಮೈಗೂಡಿಸಿಕೊಂಡಿರುತ್ತಾರೆ.
ಅಂತಹ ವ್ಯಕ್ತಿಗಳಿಗೆ ಸಿಡಿ ಕಂಬದ ಕೊಂಡಿಗೆ ವ್ರತಧಾರಿಯ ಬೆನ್ನು ಭಾಗದ ಚರ್ಮಕ್ಕೆ ಬಂಡಾರ ಹಾಕಿ ಚೂಪಾದ ಕೊಂಡಿ ಸಿಲುಕಿಸಲಾಗುತ್ತದೆ. ಬಳಿಕ ಮೂರು ಸುತ್ತು ಸಿಡಿ ಕಂಬ ತಿರುಗಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಈ ವೇಳೆ ಸೇರಿದ್ದ ಜನಸ್ತೋಮ ಚಪ್ಪಳೆ, ಶಿಳ್ಳೆ ಹೊಡೆದು ಉದೋ ಉದೋ ಎಂದು ದೇವರ ಹರ್ಷೋದ್ಘಾರ ಕೂಗಿದರು. ಇದೊಂದು ವಿಶೇಷ ಹಾಗೂ ವಿಶಿಷ್ಠ ಆಚರಣೆ ಆಗಿರುವುದರಿಂದ ಸಹಜವಾಗಿ ಎಲ್ಲರಲ್ಲೂ ಕೌತಕ ಮೂಡಿರುತ್ತದೆ. ಇದರಿಂದಲೇ ಈ ಸಿಡಿ ಉತ್ಸವ ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತರು ಕಣ್ತುಂಬಿಕೊಂಡರು.
ಇದಕ್ಕೂ ಮುನ್ನಾ ದಿನ ಮಂಗಳವಾರದಂದು ಸುತ್ತಲ ಏಳು ಗ್ರಾಮಗಳ ಮನೆಯಿಂದ ಮಹಿಳೆಯರು ಅಮ್ಮನವರ ದೇವಸ್ಥಾನಕ್ಕೆ ತೆರಳಿ ಮಡಿಲಕ್ಕಿ, ಸೀರೆ ಹಾಗೂ ಕುಪ್ಪಸ ಸಮರ್ಪಿಸಿದರು. ಬಳಿಕ ದೇವಿಯ ದರ್ಶನ ಪಡೆದು ಹಣ್ಣು ಕಾಯಿ ಪೂಜೆ ಮಾಡಿಸಿ ಕುಟುಂಬದ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ಧಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಶ್ರೀ ದೇವಿಗೆ ರಜತ ಮುಖವಾಡ ಹಾಕಲಾಗಿದ್ದು ವಿಶೇಷ ಪುಷ್ಪಾಲಂಕಾರ ಮಾಡಲಾಗಿದ್ದು ಭಕ್ತರ ಮನಸೂರೆಗೊಂಡಿತು. ಇಡಿ ಗ್ರಾಮ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿತ್ತು. ಮಂಗಳವಾರ ರಾತ್ರಿ ಲೇಸರ್ ಲೈಟ್ ಹಾಗೂ ಡಿಜೆ ಸಂಗೀತಕ್ಕೆ ಎಲ್ಲರೂ ಕುಣಿದು ಕಪ್ಪಳಿಸಿ ಸಂತಸಗೊಂಡರು.
ಪುರಾಣ ಪ್ರಸಿದ್ಧ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಉತ್ಸವ ಮಾಡಲು ಸುಮಾರು 24 ವರ್ಷಗಳಿಂದಲೂ ದೇವಿಯು ಅಪ್ಪಣೆ ನೀಡಿರಲಿಲ್ಲ. ಆದರೆ ಇತ್ತೀಚೆಗಷ್ಟೆ ದೇವಿ ಜಾತ್ರೆ ಮಾಡಲು ಅಪ್ಪಣೆ ನೀಡಿದ್ದರ ಮೇರೆಗೆ 24 ವರ್ಷಗಳ ನಂತರನ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.
ಇದನ್ನು ಒದಿ : https://cnewstv.in/?p=10103
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
24 ವರ್ಷಗಳ ನಂತರ ಅದ್ಧೂರಿಯಾಗಿ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ.. 2022-06-09
Recent Comments