ಅಕ್ರಮವಾಗಿ ರೈಲಿನಲ್ಲಿ 2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ.
Cnewstv.in / 09.06.2022 / ಕಾರವಾರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅಕ್ರಮವಾಗಿ ರೈಲಿನಲ್ಲಿ 2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ.
ಕಾರವಾರ : 2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಟಿಕೆಟ್ ಇಲ್ಲದೆ ರೈಲು ಸಂಖ್ಯೆ.12133 (CSMT-ಮಂಗಳೂರು ಜೆಎನ್ಎಕ್ಸ್‌ಪ್ರೆಸ್) ನಲ್ಲಿ ಅಪರಿಚಿತ ವ್ಯಕ್ತಿಯು ಎರಡು ಕೋಟಿ ರೂ. ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನದ ಚೆನ್ ಸಿಂಗ್ ಯಾನೆ ಮನೋಹರ್ ಹೇಮ ಸಿಂಗ್ ( 22 ವರ್ಷ) ಎಂದು ಗುರುತಿಸಲಾಗಿದೆ.
ಮನೋಹರ್ ಹೇಮ ಸಿಂಗ್ ನಾ, ಬ್ಯಾಗ್ ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದಾರೆಂದು ಬೇಲಾಪುರದಿಂದ ರೈಲ್ವೆ ಅಧಿಕಾರಿ ಲಿಖಿತ ಮಾಹಿತಿಯನ್ನು ಕಾರವಾರ ರೈಲ್ವೆ ಪೊಲೀಸರಿಗೆ ಸುಳಿವು ನೀಡಿದರು.
ಇದನ್ನು ಆಧರಿಸಿ ರೈಲ್ವೆ ಪೊಲೀಸರು ಕಾರವಾರ ನಿಲ್ದಾಣದಲ್ಲಿ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿದಾ, ಇವನ್ನು ರೈಲ್ವೆ ಟಿಸಿ ಗಳಿಗೆ ಮಾಹಿತಿ ನೀಡಲು ಹಾಗೂ ಟಿಕೆಟ್ ತೋರಿಸಲು ನಿರಾಕರಿಸಿದ್ದ.
ನಂತರ ಚೆನ್ ಸಿಂಗ್ ಬ್ಯಾಗ್‌ನಲ್ಲಿ ಭಾರತೀಯ ಕರೆನ್ಸಿಯ 2 ಕೋಟಿ ರೂಪಾಯಿ ನೋಟುಗಳು ಇರುವುದನ್ನು ಒಪ್ಪಿಕೊಂಡಿದ್ದಾನೆ.
ಇಡೀ ಘಟನೆಯನ್ನು ಪಂಚನಾಮ ಮಾಡಿದ್ದು, ಚಿತ್ರೀಕರಿಸಿ, ದಾಖಲೆಗಳೊಂದಿಗೆ ನೀಡಲಾಗಿದೆ. ಆರೋಪಿತನಿಂದ 2 ಕೋಟಿ ರೂ. ನಗದು, ವಶಪಡಿಸಿಕೊಂಡ ಬ್ಯಾಗ ನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಗ್ರಾಮಾಂತರ ಪೊಲೀಸ್, ಕಾರವಾರ ಸಿಪಿಐಗೆ ಹಸ್ತಾಂತರಿಸಲಾಗಿದೆ.
ಇದನ್ನು ಒದಿ : https://cnewstv.in/?p=10093
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2 ಕೋಟಿ ರೂ. ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ. 2022-06-09
Recent Comments