Breaking News

ಪವರ್‌ಫುಲ್ ಎಣ್ಣೆಗಳು: ಕೂದಲು ಉದುರುವಿಕೆ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ

ಇಂದಿನ ಪ್ರತಿಯೊಬ್ಬ ಪುರುಷರು ಹಾಗೂ ಮಹಿಳೆಯರು ಸಾಮಾನ್ಯವಾಗಿ ಎದುರಿಸುವಂತಹ ಸಮಸ್ಯೆಯೆಂದರೆ ಕೂದಲು ಉದುರುವಿಕೆ ಹಾಗೂ ಕೂದಲು ತೆಳುವಾಗುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಆದರೆ ಈ ಸಮಸ್ಯೆಗೆ ನಿಮಗೆ ಈ ಲೇಖನದಲ್ಲಿ ಶಾಶ್ವತ ಪರಿಹಾರ ಹೇಳಿಕೊಡಲಿದ್ದೇವೆ. ಮನೆಯಲ್ಲೇ ತಯಾರಿಸಿದ ಕೆಲವೊಂದು ತೈಲಗಳಿಂದ ಕೂದಲು ಉದುರುವಿಕೆ ತಡೆಯಬಹುದು. ಗಿಡಮೂಲಿಕೆ ತೈಲವು ಕೂದಲು ಉದುರುವಿಕೆ ನಿಯಂತ್ರಿಸಲು ನೆರವಾಗುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು.

ಕೂದಲು ಉದುರುವಿಕೆಗೆ ನಾನಾ ಸಮಸ್ಯೆಗಳು ಇರಬಹುದು. ಇದರಲ್ಲಿ ಕಲುಷಿತ ವಾತಾವರಣ, ಒತ್ತಡ, ರಾಸಾಯನಿಕದ ಅತಿಯಾದ ಬಳಕೆ ಮತ್ತು ಹಾಮೋರ್ನು ಅಸಮತೋಲನವು ಪ್ರಮುಖ ಕಾರಣಗಳಾಗಿವೆ. ಕೂದಲು ಉದುರುವಿಕೆಯನ್ನು ನೀವು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಮಾಡಿದರೆ ತಲೆ ಬೋಳಾಗುವುದನ್ನು ತಡೆಯಬಹುದು. ಕೂದಲು ಉದುರುವಿಕೆ ತಡೆಯುವ ಜತೆಗೆ ಈ ತೈಲಗಳು ತಲೆಹೊಟ್ಟು, ಕೂದಲು ಬಿಳಿಯಾಗುವುದು ಮತ್ತು ತಲೆಬುರುಡೆಯ ಸೋಂಕುಗಳನ್ನು ತಡೆಯುವುದು.

ದಾಸವಾಳದ ಗಿಡಮೂಲಿಕೆ ತೈಲ ದಾಸವಾಳದ ಹೂವನ್ನು ನಿಯಮಿತವಾಗಿ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಲಾಭಗಳು ಕೂದಲಿಗೆ ಸಿಗುವುದು. ಇದರಲ್ಲಿ ವಿಟಮಿನ್ ಇ ಮತ್ತು ಸಿ, ಅಮಿನೋ ಆಮ್ಲ ಇದ್ದು, ಇದು ಕೂದಲು ಉದುರುವಿಕೆ ತಡೆಯಲು ಮತ್ತು ಕೂದಲಿಗೆ ಕಪ್ಪು ಬಣ್ಣ ನೀಡಲು ನೆರವಾಗುವುದು. ದಾಸವಾಳವು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಲು ಪ್ರಮುಖ ಮದ್ದು. ಬೇಕಾಗುವ ಸಾಮಗ್ರಿಗಳು 2 ದಾಸವಾಳದ ಹೂವುಗಳು ½ ಕಪ್ ದಾಸವಾಳದ ಎಲೆಗಳು ½ ಕಪ್ ತೆಂಗಿನೆಣ್ಣೆ ¼ ಕಪ್ ಬಾದಾಮಿ ಎಣ್ಣೆ ತಯಾರಿಸುವ ವಿಧಾನ ದಾಸವಾಳದ ಎಲೆಗಳು ಮತ್ತು ಹೂವನ್ನು ಸರಿಯಾಗಿ ತೊಳೆದುಕೊಳ್ಳಿ. ಇದನ್ನು ಸೂರ್ಯನ ಬಿಸಿಲು ಅಥವಾ ಒವನ್ ನಲ್ಲಿ ಒಣಗಿಸಿ. ಒಂದು ಸಣ್ಣ ಬಾಣಲೆಗೆ ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆ ಹಾಕಿ. ಎರಡು ಬಿಸಿ ಮಾಡಿ ಮತ್ತು ಒಣಗಿರುವ ದಾಸವಾಳದ ಎಲೆಗಳು ಮತ್ತು ಹೂವನ್ನು ಇದಕ್ಕೆ ಹಾಕಿಕೊಂಡು ಕಡಿಮೆ ಬೆಂಕಿಯಲ್ಲಿ ಮತ್ತೆ ಐದು ನಿಮಿಷ ಬಿಸಿ ಮಾಡಿ. ಕೋಣೆಯ ತಾಪಮಾನಕ್ಕೆ ಎಣ್ಣೆಯು ಬಂದ ಬಳಿಕ ಸೋಸಿಟ್ಟುಕೊಳ್ಳಿ.

ಅಲೋವೆರಾ ಎಣ್ಣೆ ಅಲೋವೆರಾವು ಕೂದಲು ಮತ್ತು ತಲೆಬುರುಡೆಯನ್ನು ಮೊಶ್ಚಿರೈಸ್ ಮಾಡುವುದು. ವಿಟಮಿನ್ ಎ ಮತ್ತು ಇ ಇರುವಂತಹ ಅಲೋವೆರಾವು ಕೂದಲಿನ ಕೋಶಗಳನ್ನು ಬಲಗೊಳಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಬೇಕಾಗುವ ಸಾಮಗ್ರಿಗಳು 1 ಅಲೋವೆರಾ ಎಲೆ ½ ಕಪ್ ತೆಂಗಿನೆಣ್ಣೆ ಕೆಲವು ಹನಿ ಸಾರಭೂತ ತೈಲ(ಆಯ್ಕೆಗೆ ಬಿಟ್ಟದ್ದು) ತಯಾರಿಸುವ ವಿಧಾನ ತಾಜಾ ಅಲೋವೆರಾದ ಎಲೆತೆಗೆದುಕೊಂಡು ಅದರ ಮುಳ್ಳು ಮತ್ತು ಸಿಪ್ಪೆ ತೆಗೆಯಿರಿ. ಇದರ ಬಿಳಿ ಲೋಳೆ ತೆಗೆದುಕೊಂಡು ಅದನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ತೆಂಗಿನೆಣ್ಣೆ ಹಾಕಿಕೊಳ್ಳಿ ಮತ್ತು ಸಾಸ್ ಪ್ಯಾನ್ ನಲ್ಲಿ ಈ ಮಿಶ್ರಣವನ್ನು ಬಿಸಿ ಮಾಡಿ. 5-7 ನಿಮಿಷ ಕಾಲ ಹದ ಬೆಂಕಿಯಲ್ಲಿ ಇದನ್ನು ಬಿಸಿ ಮಾಡಿ. ನಿಮ್ಮ ಆಯ್ಕೆಯ ಸಾರಭೂತ ತೈಲವನ್ನು ಕೆಲವು ಹನಿ ಹಾಕಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಅದನ್ನು ಮುಂದೆ ಬಳಕೆ ಮಾಡಬಹುದು. ತಂಪಾದ ಜಾಗದಲ್ಲಿ ಇದನ್ನು ಇಟ್ಟರೆ ಎರಡು ವಾರ ಕಾಲ ಬಾಳಿಕೆ ಬರುವುದು.

Leave a Reply

Your email address will not be published. Required fields are marked *

*