Breaking News

8 ವರ್ಷ ಅಧಿಕಾರಾವಧಿಯನ್ನು ಪೂರೈಸಿದ ಮೋದಿ ಸರ್ಕಾರ

Cnewstv.in / 30.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

8 ವರ್ಷ ಅಧಿಕಾರಾವಧಿಯನ್ನು ಪೂರೈಸಿದ ಮೋದಿ ಸರ್ಕಾರ..

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 8 ವರ್ಷಗಳನ್ನು ಪೂರೈಸಿದೆ.

ಮೊದಲ ಅವಧಿಯಲ್ಲಿ ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿದ ಮೋದಿ ಸರ್ಕಾರ ಮತ್ತೆ 2019 ರ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸುವ ಮೂಲಕ ಎರಡನೇ ಬಾರಿ ಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಎಂಟನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಬಿಜೆಪಿ ದೇಶಾದ್ಯಂತ ಎರಡು ವಾರಗಳ ಬಿಜೆಪಿ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.

ಅಚ್ಚೆ ದಿನ್ ಆಯೆಗಾ ಎಂಬ ಕನಸಿನೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ
ರೈತರು,ಮಧ್ಯಮವರ್ಗದವರು, ಕೂಲಿ ಕಾರ್ಮಿಕರಿಗೆ ಯುವಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೆಲವೊಂದು ಪ್ರಮುಖ ಸಾಧನೆಗಳು

* ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ(370ನೇ ವಿಧಿ) ರದ್ದು.

* ಪ್ರಧಾನಮಂತ್ರಿ ಜನಧನ ಯೋಜನೆ

* ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಕಾಯ್ದೆ ಅನುಷ್ಠಾನ

* ಪಿಎಂ-ಕಿಸಾನ್‌ ಯೋಜನೆ ಮೂಲಕ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ

* ಆಯುಷ್ಮಾನ್‌ ಭಾರತ ಯೋಜನೆ.

* ಜೀವನಜ್ಯೋತಿ ವಿಮೆ ಯೋಜನೆ ಮತ್ತು ಸುರಕ್ಷಾ ವಿಮೆ ಯೋಜನೆ.

* ಅಟಲ್‌ ಪಿಂಚಣಿ ಯೋಜನೆ

* ಸಣ್ಣ ಉದ್ದಿಮೆದಾರರಿಗೆ ಸಾಲ ನೀಡುವ ಮುದ್ರಾ ಯೋಜನೆ

ಇದನ್ನು ಒದಿ : https://cnewstv.in/?p=9999

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*