ಶಿವಮೊಗ್ಗ : ಶಿವಮೊಗ್ಗದಲ್ಲಿ ಇಂದು 4 ಕರೋನಾ ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದ ಒಬ್ಬ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಇಂದು ಅತನಿಗೆ ಸೋಂಕು ದೃಢಪಟ್ಟಿದೆ. ಆದರೆ ಟ್ರಾವೆಲ್ ಹಿಸ್ಟರಿನೇ ಇಲ್ಲದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇನ್ನೂ ಸೋಂಕಿತರ ಸಂಪರ್ಕದಲ್ಲಿ ಯಾರೆಲ್ಲ ಇದ್ದರೂ ಎಂಬುದನ್ನು ಜಿಲ್ಲಾಡಳಿತ ಪತ್ತೆಹಚ್ಚುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 73 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 31 ಜನರು ಕರೋನಾದಿಂದ ಗುಣಮುಖರಾಗಿದ್ದಾರೆ ಪ್ರಸುತ್ತ ಜಿಲ್ಲೆಯಲ್ಲಿ 42 ಕರೋನಾ ಆಕ್ಟೀವ್ ಪ್ರಕರಣಗಳಿವೆ..
Read More »Monthly Archives: June 2020
ಈ ಬಾರಿ ಜಿಲ್ಲೆಯಲ್ಲಿ ಎಷ್ಟು ಜನ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ ? ಹಾಗೂ ಮಾರ್ಗಸೂಚಿ ಹೇಗಿದೆ ಗೊತ್ತಾ ??
ಶಿವಮೊಗ್ಗ : ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಇಲಾಖೆ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಬೇಕು. ಪ್ರತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ಇರುವುದು. ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನ್ ಮಾಡಲಾಗುವುದು. ಈ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಯ ದೇಹದ ತಾಪಮಾನ ಹೆಚ್ಚಿರುವುದು ಕಂಡು ಬಂದರೆ, ಅದನ್ನು ಬಹಿರಂಗಪಡಿಸದೇ, ಗೊಂದಲಕ್ಕೆ ಅವಕಾಶ ನೀಡದೆ, ಅಂತಹ ವಿದ್ಯಾರ್ಥಿಗಳಿಗೆ ಮೀಸಲಾಗಿರಿಸಿರುವ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.. ಜೂನ್ 25ರಿಂದ ಜುಲೈ 3ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯ 24243 ವಿದ್ಯಾರ್ಥಿಗಳು ಬರೆಯಲಿದ್ದು, ಇವರಲ್ಲಿ 12287 ಬಾಲಕರು ಹಾಗೂ ...
Read More »ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಶಿವಮೊಗ್ಗ ಜಿಲ್ಲೆ SSLC ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ಕೊಡುಗೆ
ಶಿವಮೊಗ್ಗ : ಕೊರೊನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ ತಿಂಗಳ 25 ರಿಂದ ಜುಲೈ 4 ರ ವರೆಗೆ ನಡೆಯಲಿದ್ದು ರಾಜ್ಯ ಸರಕಾರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಕಡ್ಡಾಯಗೊಳಿಸಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆಯುವಲ್ಲಿ ಅನುಕೂಲವಾಗುವಂತೆ 25, 500 ಟ್ರಿಪಲ್ ಲೇಯರ್ ಫೇಸ್ ಮಾಸ್ಕ್, ಶಿಕ್ಷಕರ ಆರೋಗ್ಯ ರಕ್ಷಣೆಗಾಗಿ ಎನ್ 95 ಮಾಸ್ಕ್, ಫೇಸ್ ಶೀಲ್ಡ್ ಗಳನ್ನು ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪರವಾಗಿ ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ...
Read More »ಶಿವಮೊಗ್ಗದಲ್ಲಿ ಇಂದು 2 ಪಾಸಿಟಿವ್ ಪ್ರಕರಣಗಳು ಪತ್ತೆ
ಶಿವಮೊಗ್ಗ : ಶಿವಮೊಗ್ಗದಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ದಿನೇ ದಿನೇ ಹೆಚ್ಚುತಲಿದ್ದು ಇಂದು ಸಂಜೆ ಸಹ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 53 ಕ್ಕೆ ತಲುಪಿದೆ. ಮಹರಾಷ್ಟ್ರದಿಂದ ಶಿವಮೊಗ್ಗ ಕ್ಕೆ ಬಂದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಮೇ26 ರಂದು ಇವರು ಮಹಾರಾಷ್ಟ್ರ ರಾಜ್ಯದಿಂದ ಶಿವಮೊಗ್ಗಗೆ ಬಂದಿದ್ದರು. ಶಿವಮೊಗ್ಗದ ಗ್ರಾಮಾತರ ಕ್ಷೇತ್ರದ ನಿವಾಸಿಗಳಾಗಿದ್ದ ಇವರನ್ನು ಬೈಪಾಸ್ ಬಳಿಯ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತು. ಇವರಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕೊರೋನ ಹಾಸ್ಪಿಟಲ್ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗ ...
Read More »ಸ್ಪೋಟಕ ತಿನ್ನಿಸಿ ಆನೆಯನ್ನು ಕೊಂದ ಪಾಪಿಗಳು
ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನಿಟ್ಟು ಅದನ್ನು ಆನೆ ತಿನ್ನುವಂತೆ ಮಾಡಿ ಆನೆಯನ್ನು ಕೊಂದಿರುವ ಘಟನೆ ಕೇರಳ ರಾಜ್ಯದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಅರಸಿ ಆನೆಯೊಂದು ಹಳ್ಳಿಯ ಕಡೆಗೆ ಬಂದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನು ಇಟ್ಟು ಆನೆ ಇರುವ ಪ್ರದೇಶದಲ್ಲಿ ಇಟ್ಟಿದ್ದಾರೆ. ಆನೆ ಈ ಪೈನಾಪಲ್ ಹಣ್ಣನ್ನು ತಿನ್ನುವಾಗ ಆನೆಯ ಬಾಯಿಯಲ್ಲೇ ಸ್ಪೋಟಕ ಸ್ಫೋಟಗೊಂಡಿದೆ. ಇದರಿಂದ ಆನೆಯ ನಾಲಿಗೆ ಹಾಗೂ ಬಾಯಿಗೆ ಗಂಭೀರವಾದ ಗಾಯವಾಗಿದ್ದು ಆಹಾರ ಸೇವಿಸುವುದೇ ಕಷ್ಟವಾಗಿದೆ. ಯಮಯಾತನೆಯನ್ನು ಸಹಿಸಿಕೊಳ್ಳಲು ಆನೆ ಸಮೀಪದ ಕಾಡಿನಲ್ಲಿದ್ದ ...
Read More »ಚರಂಡಿ ಹೂಳು ತೆಗೆಯುವ ಕಾರ್ಯ ಬೇಗನೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಶಿವಮೊಗ್ಗ : ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲಾ ಚರಂಡಿಗಳ ಹೂಳು ತೆಗೆಯುವುದು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಗಾಲದ ಪೂರ್ವಸಿದ್ಧತೆ ಪರೀಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಸೂಚನೆಗಳನ್ನು ನೀಡಿದರು. ಮಳೆಗಾಲದ ಸಂದರ್ಭದಲ್ಲಿ ಚರಂಡಿ ತುಂಬಿ ಯಾವುದೇ ಕಾರಣಕ್ಕೂ ನೀರು ಹೊರಗೆ ಹರಿಯುವ ಪರಿಸ್ಥಿತಿ ಎಲ್ಲಿಯೂ ಕಾಣಿಸಬಾರದು. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾದರೆ ಸಂಬಂಧಪಟ್ಟ ...
Read More »ದಿಢೀರ್ ನಾಪತ್ತೆಯಾಗಿದ ಯುವಕ, ಮೂರು ದಿನದ ಬಳಿಕ ತುಂಗಾ ನದಿಯಲ್ಲಿ ಶವವಾಗಿ ಪತ್ತೆ.
ಶಿವಮೊಗ್ಗ : ಶಿವಮೊಗ್ಗ KSRTC ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ (28) ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ, ಈ ಕುರಿತು ತುಂಗಾ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.. ಭಾನುವಾರ ಬೆಳಗ್ಗೆ ಅವನ ಬೈಕ್ ಮಂಡಗದ್ದೆ ಕಾಡಿನಲ್ಲಿ ಪತ್ತೆಯಾಗಿದ್ದು, ಗಾಜನೂರು ಡ್ಯಾಮ್ ನ ಹಿನ್ನೀರು ಮಂಡಗದ್ದೆಯಲ್ಲಿ ಬೆಸ್ತರು ಬಳಸುವ ಉಕ್ಕಡದಲ್ಲಿ ಅವನ ಪರ್ಸು, ಮೊಬೈಲ್ ಪತ್ತೆಯಾಗಿದ್ದವು. ಅದೇ ಸ್ಥಳದಲ್ಲಿ ಇಂದು ಮಧ್ಯಾಹ್ನ ಆತನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ...
Read More »ಆಯನೂರು ವೈದ್ಯೆಯಲ್ಲಿ ಕಾಣಿಸಿಕೊಂಡ ಕರೋನಾ ಸೋಂಕು : ಸಮುದಾಯ ಆರೋಗ್ಯ ಕೇಂದ್ರ ಸ್ಯಾನಿಟೈಸ್
ಶಿವಮೊಗ್ಗ : ಸೋಂಕಿತ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಒಬ್ಬರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ವೈದ್ಯೆಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯೊಬ್ಬರು ಓರ್ವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರು. ಆದರೆ ಆತನಿಗೆ ಕರೋನಾ ತಪಾಸಣೆ ಮಾಡಿದಾಗ ಕರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಕೂಡಲೇ ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಸೇರಿದಂತೆ ಆರು ಜನರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದೀಗ ವೈದ್ಯೆಯಲ್ಲೂ ಕರೋನಾ ಸೋಂಕು ಕಂಡುಬಂದಿದೆ. ಆದರೆ ಹೋಂ ಕ್ವಾರಂಟೈನ್ ನಲ್ಲಿದ್ದ ಇನ್ನು ಐದು ಜನರಲ್ಲಿ ಕರೋನಾ ...
Read More »ಜಯನಗರ ಪೊಲೀಸ್ ಠಾಣೆ ಸೀಲ್ ಡೌನ್
ಶಿವಮೊಗ್ಗ: ಕರೋನಾ ಆತಂಕದ ಹಿನ್ನೆಲೆಯಲ್ಲಿ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಇಡೀ ಪೊಲೀಸ್ ಠಾಣೆಗೂ ಸ್ಯಾನಿಟೈಸೇಷನ್ ಮಾಡಲಾಗಿದೆ. ಕೆಎಸ್ ಆರ್ ಪಿ ಎಎಸ್ ಐ ಸೇರಿದಂತೆ ಆರು ಜನ ಕೆಎಸ್ ಆರ್ ಪಿ ಪೊಲೀಸರಿಗೆ ಕರೋನಾ ಕಾಣಿಸಿಕೊಂಡಿತ್ತು. ಕೆಎಸ್ ಆರ್ ಪಿ ಎಎಸ್ ಐ ಮಗಳು ಜಯನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರೋನಾ ಸೋಂಕಿತ ಎಎಸ್ ಐ ಪ್ರಾಥಮಿಕ ಸಂಪರ್ಕದಲ್ಲಿ ಅವರ ಮಗಳೂ ಇದ್ದ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ...
Read More »
C News TV Kannada News Online in cnewstv