ಶಿವಮೊಗ್ಗ : ಕೊರೊನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ ತಿಂಗಳ 25 ರಿಂದ ಜುಲೈ 4 ರ ವರೆಗೆ ನಡೆಯಲಿದ್ದು ರಾಜ್ಯ ಸರಕಾರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಕಡ್ಡಾಯಗೊಳಿಸಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆಯುವಲ್ಲಿ ಅನುಕೂಲವಾಗುವಂತೆ 25, 500 ಟ್ರಿಪಲ್ ಲೇಯರ್ ಫೇಸ್ ಮಾಸ್ಕ್, ಶಿಕ್ಷಕರ ಆರೋಗ್ಯ ರಕ್ಷಣೆಗಾಗಿ ಎನ್ 95 ಮಾಸ್ಕ್, ಫೇಸ್ ಶೀಲ್ಡ್ ಗಳನ್ನು ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪರವಾಗಿ ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾಅಧ್ಯಕ್ಷರಾದ ಶಿವರಾಮ್ ಕೆ ಎಮ್ ರವರು ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಕೆ ಬಿ ಯವರಿಗೆ ವಿತರಿಸಿದರು..
C News TV Kannada News Online in cnewstv