ಶಿವಮೊಗ್ಗ : ಶಿವಮೊಗ್ಗ KSRTC ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ (28) ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ, ಈ ಕುರಿತು ತುಂಗಾ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು..
ಭಾನುವಾರ ಬೆಳಗ್ಗೆ ಅವನ ಬೈಕ್ ಮಂಡಗದ್ದೆ ಕಾಡಿನಲ್ಲಿ ಪತ್ತೆಯಾಗಿದ್ದು, ಗಾಜನೂರು ಡ್ಯಾಮ್ ನ ಹಿನ್ನೀರು ಮಂಡಗದ್ದೆಯಲ್ಲಿ ಬೆಸ್ತರು ಬಳಸುವ ಉಕ್ಕಡದಲ್ಲಿ ಅವನ ಪರ್ಸು, ಮೊಬೈಲ್ ಪತ್ತೆಯಾಗಿದ್ದವು. ಅದೇ ಸ್ಥಳದಲ್ಲಿ ಇಂದು ಮಧ್ಯಾಹ್ನ ಆತನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
Recent Comments