ಶಿವಮೊಗ್ಗ : ಸೋಂಕಿತ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಒಬ್ಬರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ವೈದ್ಯೆಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯೊಬ್ಬರು ಓರ್ವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರು. ಆದರೆ ಆತನಿಗೆ ಕರೋನಾ ತಪಾಸಣೆ ಮಾಡಿದಾಗ ಕರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಕೂಡಲೇ ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯೆ ಸೇರಿದಂತೆ ಆರು ಜನರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದೀಗ ವೈದ್ಯೆಯಲ್ಲೂ ಕರೋನಾ ಸೋಂಕು ಕಂಡುಬಂದಿದೆ. ಆದರೆ ಹೋಂ ಕ್ವಾರಂಟೈನ್ ನಲ್ಲಿದ್ದ ಇನ್ನು ಐದು ಜನರಲ್ಲಿ ಕರೋನಾ ಸೋಂಕು ಕಂಡುಬಂದಿಲ್ಲ. ವೈದ್ಯೆ ಹೋಂ ಕ್ವಾರಂಟೈನ್ ಗೆ ಹೋಗುವ ಮುನ್ನ ಸಾಕಷ್ಟು ಜನರಿಗೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ. ಇದರಿಂದಾಗಿ ಆಯನೂರು ಭಾಗದ ಜನರಲ್ಲಿ ಆತಂಕ ಆರಂಭಗೊಂಡಿದೆ. ಇಂದು ಆಯನೂರು ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಯಿತು.
Recent Comments