Breaking News

Monthly Archives: April 2020

ಮಂಗನಕಾಯಿಲೆಗೆ ಮತ್ತೊಂದು ಬಲಿ

ಶಿವಮೊಗ್ಗ: ವಿಶ್ವದಾದ್ಯಂತ ಕರೋನಾ ವೈರಸ್ ತಲ್ಲಣ ಸೃಷ್ಟಿಸಿದ್ದರೆ ಮಲೆನಾಡಿನಲ್ಲಿ ಕರೋನಾ ಭೀತಿಯ ನಡುವೆ ಮಂನಗನಕಾಯಿಲೆ ಅಟ್ಟಹಾಸ ಮೆರೆಯುತ್ತಿದೆ. ಹೌದು ಮಂಗನಕಾಯಿಲೆಗೆ ಮಲೆನಾಡಿನಲ್ಲಿ ಮತ್ತೊಂದು ಬಲಿಯಾಗಿದೆ. ತೀರ್ಥಹಳ್ಳಿ ತಾಲೂಕು ಉಡುಕೆರೆ ಗ್ರಾಮದ ಸುಬ್ರಹ್ಮಣ್ಯ(53) ಮಂಗನಕಾಯಿಲೆಗೆ ಬಲಿಯಾಗಿದ್ದಾರೆ. ಒಂದುವಾರದ ಹಿಂದೆ ಸುಬ್ರಹ್ಮಣ್ಯ ಅವರಲ್ಲಿ ಕೆಎಫ್ ಡಿ ಕಾಣಿಸಿಕೊಂಡಿತ್ತು. ಅಂದಿನಿಂದಲೂ ಅವರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಸುಬ್ರಹ್ಮಣ್ಯ ಮೃತಪಟ್ಟಿದ್ದಾರೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮೂವರು ಹಾಗೂ ಸಾಗರ ತಾಲೂಕಿನ ಇಬ್ಬರು ಮಹಾಮಾರಿ ಮಂಗನಕಾಯಿಲೆಗೆ ...

Read More »

8000 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಗೆ ಸಿದ್ಧತೆ

  ಶಿವಮೊಗ್ಗ: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಸಾಮಾನ್ಯ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ತಿಳಿಸಿದರು. ಶಿವಮೊಗ್ಗ ಸಮೀಪದ ಗೋಂದಿಚಟ್ನಳ್ಳಿಯ ರೈಸ್ ಮಿಲ್ ನಲ್ಲಿ ವಿತರಣೆಗಾಗಿ ಪ್ಯಾಕ್ ಮಾಡಲಾಗುತ್ತಿದ್ದ ಗೋದಾಮಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಆಹಾರದ ಕಿಟ್ ಗಳನ್ನು ...

Read More »

ಪ್ರತಿ ವಾರ್ಡ್‍ನಲ್ಲಿ ಹಾಪ್‍ಕಾಮ್ಸ್ ಮಳಿಗೆ ಆರಂಭಕ್ಕೆ ನೆರವು: ಸಚಿವ ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಹಾಪ್‍ಕಾಮ್ಸ್ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆ ಆರಂಭಿಸಲು ಸ್ಥಳ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅವರು ಶನಿವಾರ ಹಾಪ್‍ಕಾಮ್ಸ್ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಸುಗಮ ಪೂರೈಕೆಗಾಗಿ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಪ್ರಸ್ತುತ 15ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಲ್ಲಾ 20 ವಾರ್ಡ್‍ಗಳಲ್ಲಿ ಸಹ ಹಾಪ್‍ಕಾಮ್ಸ್ ಮಳಿಗೆ ಆರಂಭಿಸಲು ಸೂಕ್ತ ಸ್ಥಳವನ್ನು ...

Read More »

ಜಿಲ್ಲೆಯಲ್ಲಿ ಇಂದಿನಿಂದ ಕೋಳಿ, ಮೊಟ್ಟೆ ಮಾರಾಟ ಪುನಾರಂಭ : ಸಚಿವ ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ : ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಕಾರಣದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿದ್ದ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಪುನಾರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆರೆಯ ಜಿಲ್ಲೆಯಲ್ಲಿ ಹಕ್ಕಿಜ್ವರದ ಹೊಸ ಪ್ರಕರಣಗಳು ವರದಿಯಾಗದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೊಳೆಗೇರಿ ನಿವಾಸಿಗಳು ಸೇರಿದಂತೆ ಬಡವರಿಗೆ ಪ್ರತಿ ಕುಟುಂಬಕ್ಕೆ ...

Read More »

ನಗರದಲ್ಲಿ ಔಷಧಿ ಸಿಂಪಡಿಸುವ ವಾಹನದ ಉದ್ಘಾಟನೆ

  ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಶ್ರೀ ಹೆಚ್ ಸಿ ಯೋಗೆಶ್ ರವರು ನಗರದಾದ್ಯಂತ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ತಮ್ಮ ಸ್ವಂತ ಖರ್ಚಿನಿಂದ ಔಷಧಿ ಸಿಂಪಡಿಸುವ ವಾಹನವನ್ನು ಸಿದ್ಧಪಡಿಸಿದು ಇಂದು ಬೆಳಗ್ಗೆ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಹತ್ತಿರ ವಾಹನವನ್ನು ಉದ್ಘಾಟನೆ ಮಾಡಿ ಹೊಸಮನೆ ಬಡಾವಣೆ ಸುತ್ತ ಮುತ್ತಲು ಔಷಧ ಸಿಂಪಡಿಸಲಾಯಿತು ಔಷಧಿ ಸಿಂಪಡಿಸುವ ಕಾರ್ಯದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್.ಸಿ ಯೋಗೀಶ್ , ಹೊಸಮನೆ ವಾರ್ಡ್ ನ ಪಾಲಿಕೆ ಸದಸ್ಯರಾದ ರೇಖಾ ...

Read More »

ಕರೋನಾ ಹಿನ್ನೆಲೆ ಕಾರ್ಕಳದಿಂದ ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲೇ ಊರಿಗೆ ಹೊರಟ ದಂಪತಿ

ಶಿವಮೊಗ್ಗ: ಕರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ದಂಪತಿ ತಮ್ಮೂರಿಗೆ ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ದಂಪತಿ ತಿರುಪತಿ ಹಾಗೂ ಚಂದವ್ವ ಕೆಲಸಕ್ಕೆಂದು ಕೊಪ್ಪಳ ಜಿಲ್ಲೆಯಿಂದ ಕಾರ್ಕಳಕ್ಕೆ ತೆರಳಿದ್ದರು. ಅಲ್ಲಿ ಒಂದು ವಾರ ಕೆಲಸವನ್ನೂ ಮಾಡಿದ್ದರು. ಆದರೆ ಕರೋನಾ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಯಿತು. ಆದರೆ ಈ ದಂಪತಿ ಮತ್ತೆ ಕೆಲಸ ಆರಂಭಗೊಳ್ಳಬಹುದೇನೋ ಎಂಬ ನಿರೀಕ್ಷೆಯಲ್ಲಿ ಅಲ್ಲೇ ಒಂದು ವಾರ ಕಳೆದಿದ್ದಾರೆ. ಅಷ್ಟರಲ್ಲಾಗಲೇ ಅವರು ದುಡಿದ ಹಣವೆಲ್ಲಾ ಖಾಲಿಯಾಗಿದೆ. ಆಗ ...

Read More »