ಶಿವಮೊಗ್ಗ: ವಿಶ್ವದಾದ್ಯಂತ ಕರೋನಾ ವೈರಸ್ ತಲ್ಲಣ ಸೃಷ್ಟಿಸಿದ್ದರೆ ಮಲೆನಾಡಿನಲ್ಲಿ ಕರೋನಾ ಭೀತಿಯ ನಡುವೆ ಮಂನಗನಕಾಯಿಲೆ ಅಟ್ಟಹಾಸ ಮೆರೆಯುತ್ತಿದೆ. ಹೌದು ಮಂಗನಕಾಯಿಲೆಗೆ ಮಲೆನಾಡಿನಲ್ಲಿ ಮತ್ತೊಂದು ಬಲಿಯಾಗಿದೆ. ತೀರ್ಥಹಳ್ಳಿ ತಾಲೂಕು ಉಡುಕೆರೆ ಗ್ರಾಮದ ಸುಬ್ರಹ್ಮಣ್ಯ(53) ಮಂಗನಕಾಯಿಲೆಗೆ ಬಲಿಯಾಗಿದ್ದಾರೆ. ಒಂದುವಾರದ ಹಿಂದೆ ಸುಬ್ರಹ್ಮಣ್ಯ ಅವರಲ್ಲಿ ಕೆಎಫ್ ಡಿ ಕಾಣಿಸಿಕೊಂಡಿತ್ತು. ಅಂದಿನಿಂದಲೂ ಅವರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಸುಬ್ರಹ್ಮಣ್ಯ ಮೃತಪಟ್ಟಿದ್ದಾರೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮೂವರು ಹಾಗೂ ಸಾಗರ ತಾಲೂಕಿನ ಇಬ್ಬರು ಮಹಾಮಾರಿ ಮಂಗನಕಾಯಿಲೆಗೆ ಬಲಿಯಾಗಿದ್ದಾರೆ.
- ಮಿಡಟೌನ್ ರೋಟರಿಗೆ ಐತಿಹಾಸಿಕ ಸಮಗ್ರ ಪ್ರಶಸ್ತಿ – ಹರ್ಷ ಕಾಮತ್ ...
- ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ನಾಪತ್ತೆ.. ...
- ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ. ...
- ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ...
- ಏಪ್ರಿಲ್ ನಿಂದ ಸೆಪ್ಟೆಂಬರ್-2025 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆಯಡಿ 1,82,000 ಜನರಿಗೆ ದಂಡ : ವಿ.ಎಸ್. ಉಗ್ರಪ್ಪ ...
- ಜನರೇ ಮೆಚ್ಚಿದ ‘ಬಂಗಾರ’ದ ಮನುಷ್ಯ…… ಬಡವರ ಜೀವನಕ್ಕೆ ಆಧಾರವಾದ ಕನಸುಗಾರ… ...
- ಎನ್ಇಎಸ್ ಸಿಬ್ಬಂದಿಗಳಿಗೆ “ಆಡಳಿತ ನಿರ್ವಹಣೆ – ಕೌಶಲ್ಯತೆ ಕಾರ್ಯಾಗಾರ” ...
- ಚಿಕ್ಕಬಳ್ಳಾಪುರ ರೈತರಿಗೆ ಅನ್ಯಾಯ, ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪ ಖಂಡನಿಯ. ...
- ಅ.15 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ. ...
- ಅ.15 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ. ...
C News TV Kannada News Online in cnewstv