Breaking News

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿಕ್ತು ನ್ಯಾಷನಲ್ ಅವಾರ್ಡ್

 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಕಳೆದ ಆಗಸ್ಟ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಹೋರಾಡುವ ಮಕ್ಕಳ ಕಥೆಯನ್ನು ಅದ್ಭುತವಾಗಿ ಚಿತ್ರ ತಯಾರಿಸಿದ್ದರು. ಇದಕ್ಕೆ ಪ್ರೇಕ್ಷಕರು ಫುಲ್ ಖುಷಿಯಾಗಿದ್ದರು.

ಇದು ದೆಹಲಿಯಲ್ಲಿ ನಡೆದ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಢು ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ನೀಡಿ ಗೌರವಿಸಿದರು. ತಾವು ಪ್ರಶಸ್ತಿ ಪಡೆದ ವಿಡಿಯೋವನ್ನ ರಿಷಬ್ ಶೆಟ್ಟಿ ಅವರು ತಮ್ಮ ಖಾತೆಯಲ್ಲಿ ಹಾಕಿದ್ದಾರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಭ್ರಮದ ಕ್ಷಣಗಳು ವೈರಲ್ ಅಗತ್ತಿದೆ..

Leave a Reply

Your email address will not be published. Required fields are marked *

*