ಶಿವಮೊಗ್ಗ: ಮಹಾನಗರ ಪಾಲಿಕೆ ಆಶ್ರಯ ಕಚೇರಿಯಲ್ಲಿ ಎಫ್.ಡಿ.ಎ ಆಗಿ ಕಾರ್ಯನಿರ್ವಹಿಸುವ ಸುನೀಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು ಮಧ್ಯಾಹ್ನ ದೂರುದಾರ ನಾಗರಾಜ್ ಅವರಿಂದ ಎಫ್.ಡಿ.ಎ ಸುನೀಲ್ ತನ್ನ ಮನೆಯಲ್ಲಿ 10.000 ರೂ.ಹಣ ಪಡೆಯುತ್ತಿದ್ದಾಗ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿ ಮನೋಜ್,ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ, ವಿರೇಂದ್ರ,ಸಿಬ್ಬಂದಿಗಳಾದ ವಸಂತ್,ನಾಗರಾಜ್,ರಘುನಾಯ್ಕ್,ಯೇಗೇಶಪ್ಪ,ಹರೀಶ್, ಶ್ರೀನಿವಾಸ ಪಾಲ್ಗೊಂಡಿದ್ದರು.
ವರದಿ : ಇಮ್ರಾನ್ ಸಾಗರ್
C News TV Kannada News Online in cnewstv