Breaking News

ಒಂದೇ ಕಡೆ 50 ದೇವತೆಗಳ ಸಮಾಗಮ ಸಂಭ್ರಮ

 

ನಾಳೆ ಕೋಟೆ ಶ್ರೀ ಸೀತಾರಾಮಾಂಜನೇಯ
ದೇವಸ್ಥಾನದ ಆವರಣದಲ್ಲಿ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶಕ್ತಿ ದೇವತೆಗಳ ಸಮಾಗಮ ಸಮಿತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಪ್ರತಿ ವರ್ಷ ಎಳ್ಳಮವಾಸೆ ದಿನದಂದು ನಡೆಯುತ್ತಿತ್ತು, ಅದೇ ಈ ಬಾರಿ 21ನೆ ವರ್ಷದ ಆಚರಣೆಯಲ್ಲಿ
ಸೂರ್ಯಗ್ರಹಣದ ಪ್ರಯುಕ್ತ ನಾಳೆ
ಬೆಳಗ್ಗೆ ಸುಮಾರು 11 ಗಂಟೆಗೆ ನಗರದ 50 ದೇವತೆಗಳ ಸಮಾಗಮವಿದ್ದು, ಮದ್ಯಾಹ್ನ 12:30 ರಿಂದ
1:00 ಗಂಟೆಯ ಸಮಯದಲ್ಲಿ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ,ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ..

ಸಂಜೆ ಸಂಜೆ ಸಾವಿರಾರು ಮಾತೆಯರು ಬಂದು ದೇವಿಗೆ ಮಡ್ಡಕ್ಕಿ ಸಮರ್ಪಣೆಗೆ ಅವಕಾಶವಿದೆ. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನಡೆಸಲಾಗುವುದು ಎಂದು ತಿಳಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ .ಡಿ.ಎಸ್ ಅರುಣ್ ,
ಕಾರ್ಯಧ್ಯಕ್ಷರು ರಮೇಶ್ ಬಾಬುಜಾದವ್,
ಗೌರವ ಅಧ್ಯಕ್ಷರು ಸುರೇಶ್ ಕುಮಾರ್ ಬಾಳೆಗುಂಡಿ.
ಪ್ರಧಾನ ಕಾರ್ಯದರ್ಶಿ ಹೆಚ್.ಕೆ ದೀನದಯಾಳು,ಸಂಚಾಲಕರು
ಎಸ್.ಜಿ ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*