ಮಒಂದೇ ಮರಕ್ಕೆ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟಕ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದ್ದೆ..ಶ್ರೀಕಾಂತ್(29) ಮತ್ತು ಪ್ರಕಾಶ (32) ಮೃತ ಸ್ನೇಹಿತರು .ಸ್ಮಶಾನದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇಬ್ಬರು ಹೊಸನಗರದಲ್ಲಿ ಕೂಲಿಕಾರ್ಮಿಕರಾಗಿದ್ದ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »Monthly Archives: March 2019
ನೇಣುಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ.
ಶಿವಮೊಗ್ಗ ನ್ಯೂಮಂಡ್ಲಿ ಸಮೀಪದ ಪಂಪ್ ಹೌಸ್ ಬಳಿಯ ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ನ್ಯೂ ಮಂಡ್ಲಿಯ ಕೌಶಿಕ್(19) ಹಾಗೂ ಸಾಗರ ತಾಲೂಕು ಹುಲಿದೇವರ ಬನದ ಮೆಹತಾಜ್ ಶಿರಿನ್(18)ಇಬ್ಬರು ಸಹ ಅನ್ಯ ಧರ್ಮದ ಪ್ರೇಮಿಗಳಾಗಿದ್ದು, ಮದುವೆಗೆ ಎರಡು ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಕಾರಣದಿಂದ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಿವಮೊಗ್ಗದ ನ್ಯಾಷನಲ್ ಸಂಜೆ ಕಾಲೇಜಿನ ವಿದ್ಯಾರ್ಥಿಗಳಗಿದ್ದು, ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Read More »ದೇಶ ಮಾರುವವರ ಎದುರು ಚಾಯ್ ಮಾರುವವ ಉತ್ತಮ
ಪ್ರಧಾನಿ ಮೋದಿಗೆ ಷಂಡ ಎಂದು ಪದಬಳಕೆ ಮಾಡಿದ ಕಾಂಗ್ರೇಸ್ ಶಾಸಕರ ಹಾಗೂ ಪಕ್ಷದ ವಿರುದ್ಧ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಷಂಡ ಪದ ಬಳಕೆ ಸರಿಯಲ್ಲ. ದೇಶದ ಮೇಲೆ ಹಲವು ದಾಳಿಗಳಾದ ಸಂದರ್ಭದಲ್ಲಿ ನಾಮರ್ಧರಾಗಿದ್ದವರು ಕಾಂಗ್ರೆಸ್ ನವರೇ ಹೊರತು, ಮೋದಿಯಲ್ಲ. ಮೋದಿಯವರು ಈಗಾಗಲೇ ಅದನ್ನು ಸಾಬೀತು ಮಾಡಿದ್ದಾರೆ. ಮೋದಿ ಭಾರತದ ಗೌರವವನ್ನು ಎತ್ತಿಹಿಡಿದಿದ್ದಾರೆ. ಜನಾರ್ಧನ ಪೂಜಾರಿ, ಶೀಲಾದೀಕ್ಷಿತ್ ಸೇರಿದಂತೆ ಹಲವು ನಾಯಕರು ಮೋದಿ ಹಾಗೂ ಮೋದಿಯ ಕಾರ್ಯವನ್ನು ಹೊಗಳುತ್ತಿದ್ದಾರೆ.ಸೈನಿಕರ ದಾಳಿಗೆ ಸಾಕ್ಷಿ ಕೇಳಿದವರು ಷಂಡರಾಗುತ್ತಾರೆ. ನರೇಂದ್ರ ಮೋದಿಯವರು, ಷಂಡ ಹೌದೋ, ಅಲ್ಲವೋ ಎಂಬುದು, ...
Read More »ಕಣ್ಮರೆಯಾಗಿದ್ದ ರಮ್ಯಾ ಮತ್ತೆ ಪ್ರತ್ಯಕ್ಷ.
ಚಿತ್ರನಟಿ, ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾದ ಮಾಜಿ ಸಂಸದೆ ರಮ್ಯಾ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ, ರಾಜ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂದು ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ , ನವೋದ್ಯಮಿಗಳಿಗಾಗಿ ಅಯೋಜನೆ ಮಾಡಿದಂತಹ ಸಂವಾದ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದರು..
Read More »ಸಕಲ ಸರ್ಕಾರಿ ಗೌರವಗಳೊಂದಿಗೆ ಪರಿಕ್ಕರ್ ಅಂತ್ಯಸಂಸ್ಕಾರ.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಭಾನುವಾರ ರಾತ್ರಿ ವಿಧಿವಶರಾಗಿದ್ದರು. ಇಂದು ಬೆಳಿಗ್ಗೆ ಮನೋಹರ್ ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಪಂಜಿಮ್ ನ ಬಿಜೆಪಿ ಕಚೇರಿಯಲ್ಲಿ 1 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಕಲಾ ಅಕಾಡೆಮಿ ಗೆ ತೆಗೆದುಕೊಂಡು ಹೋಗಲಾಯಿತು. ಇಂದು ಸಂಜೆ ಪಣಜಿಯ ವೀರಾಮನ್ ಬೀಚ್ ಸಮೀಪ ಮನೋಹರ್ ಪರಿಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ...
Read More »“P M ನರೇಂದ್ರ ಮೋದಿ” ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ ಏಪ್ರಿಲ್ 12ಕ್ಕೆ ಬಿಡುಗಡೆ.
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಬಯೋಪಿಕ್ ಚಿತ್ರಗಳೇ ಹೆಚ್ಚಾಗಿ ಮೂಡಿಬರುತ್ತಿದೆ. ಈ ನಡುವೆ ‘ಪಿಎಂ ನರೇಂದ್ರ ಮೋದಿ’ ಶೀರ್ಷಿಕೆಯ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ದೇಶಾದ್ಯಂತ ಜನರು ಈ ಚಿತ್ರದ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಮೇರಿ ಕೋಮ್ ಹಾಗೂ ಸರಬ್ಜಿತ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಒಮಂಗ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು,ಇದೊಂದು ವಿಶೇಷವಾದ ಸಿನಿಮಾ ಆಗಿದ್ದು, ನರೇಂದ್ರ ದಾಮೋದರ್ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, 2014 ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದೇಶದ ಪ್ರಧಾನಿಯಾಗುವವರೆಗಿನ ...
Read More »ಮಧು ಬಂಗಾರಪ್ಪ ಪರವಾಗಿ ಪ್ರಚಾರ ಆರಂಭಿಸಿದ ದೇವೇಗೌಡ
ಜೆ.ಡಿ.ಎಸ್ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಕ್ಯಾಂಟೀನ್ ಇಂದು ಆರಂಭಗೊಂಡಿದೆ, ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರು ಶಿವಮೊಗ್ಗಗೆ ಆಗಮಿಸಿದ್ದರು. ಅವರು ಮಾತನಾಡುತ್ತಿದ್ದಾಗ ಹಾಸನ, ಮಂಡ್ಯದಲ್ಲಿ ಮೊಮ್ಮಕ್ಕಳು ಗೆಲುವು ಪ್ರಚಾರ ಮಾಡಲು ಮಧು ಬಂಗಾರಪ್ಪ ಪರ ಪ್ರಚಾರದಲ್ಲಿ ಶಿವಮೊಗ್ಗ. ಮತ್ತು ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಹ ಪ್ರಚಾರದಲ್ಲಿ ಮಧುರ ಪ್ರಚಾರದಲ್ಲಿದ್ದಾರೆ. ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ನಂತರ ಸೀಟ್ ಹಂಚಿಕೆ ವಿಚಾರದ ಗೊಂದಲಗಳು ಇರೋಡು ಮಾದ್ಯಮಗಳಲ್ಲಿ ಹೊರತುಪಡಿಸಿ ನಮ್ಮ ನಡುವೆ ಇಲ್ಲವೇ ಉತ್ತರ ನೀಡಿದರು …
Read More »ಭೀಕರ ರಸ್ತೆ ಅಪಘಾತ -ಓರ್ವ ಸಾವು, ಮೂವರಿಗೆ ಗಂಭೀರ ಗಾಯ.
ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಬೈರಾಪುರ ಎಂಬಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಬಾಲ ಸಾಹೇಬ್ ಕೃಷ್ಣ ದೇಸಾಯಿ(48) ಎಂಬುವವರು ಮೃತಪಟ್ಟಿದ್ದಾರೆ. ಹಾಗು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜು ಕವಿದಿದ್ದ ಕಾರಣ ರಸ್ತೆ ಕಾಣದೇ ಇದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಅಪಘಾತದ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಟ್ಟೆಯೊಂದರ ನಡುವೆ ಸಿಲುಕಿಕೊಂಡಿದೆ. ಭೀಕರ ರಸ್ತೆ ಅಪಘಾತ -ಓರ್ವ ಸಾವು, ಮೂವರಿಗೆ ಗಂಭೀರ ಗಾಯ.
Read More »ಅಗ್ನಿ ಆಕಸ್ಮಿಕಕ್ಕೆ ಐದು ಮನೆಗಳು ಭಸ್ಮ -ಬೀದಿಗೆ ಬಿದ್ದ ಬಡ ಕೂಲಿ ಕಾರ್ಮಿಕರು
ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಮತ್ತೋಡು ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಮತ್ತೋಡು ಗ್ರಾಮದ ಎಲ್ಲರೂ ಕೂಲಿ ಕೆಲಸ ಮಾಡಿ ಬಂದು ಮನೆಯ ಕೆಲಸವನ್ನೆಲ್ಲೂ ಮುಗಿಸಿ ತಮ್ಮೂರಿನಲ್ಲಿ ಟಿವಿ ಇರುವವರಮನೆಗೆ ಟಿವಿ ನೋಡಲು ಹೋಗಿದ್ದರು. ಆದರೆ ಅವರು ಟಿವಿ ನೋಡಿ ತಮ್ಮ ಮನೆಗೆ ಬರುವಷ್ಟರಲ್ಲಿ ಮನೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಕೆಲ ಮಹಿಳೆಯರು ಸುಟ್ಟಗಾಯಕ್ಕೂ ತುತ್ತಾಗಿದ್ದಾರೆ. ಕೊನೆಗೂ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ...
Read More »ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ
ಸಾವಿರಾರು ಸಸಿಗಳನ್ನು ನೆಟ್ಟಿ ತಮ್ಮ ಮಕ್ಕಳಂತೆ ಪೋಷಿಸಿದ ಸಾಲು ಮರದ ತಿಮ್ಮಕ್ಕ ಅವರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದರು. ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪಡೆದ ನಂತರ ರಾಷ್ಟ್ರಪತಿ ಅವರ ಹಣೆ ಮುಟ್ಟಿ ಆಶೀರ್ವದಿಸಿದರು.. ಈ ಪೋಟೊ ಸಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಅಗಿದೆ… ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತ
Read More »
Recent Comments