ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಬಯೋಪಿಕ್ ಚಿತ್ರಗಳೇ ಹೆಚ್ಚಾಗಿ ಮೂಡಿಬರುತ್ತಿದೆ. ಈ ನಡುವೆ ‘ಪಿಎಂ ನರೇಂದ್ರ ಮೋದಿ’ ಶೀರ್ಷಿಕೆಯ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ದೇಶಾದ್ಯಂತ ಜನರು ಈ ಚಿತ್ರದ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಮೇರಿ ಕೋಮ್ ಹಾಗೂ ಸರಬ್ಜಿತ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಒಮಂಗ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು,ಇದೊಂದು ವಿಶೇಷವಾದ ಸಿನಿಮಾ ಆಗಿದ್ದು, ನರೇಂದ್ರ ದಾಮೋದರ್ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, 2014 ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದೇಶದ ಪ್ರಧಾನಿಯಾಗುವವರೆಗಿನ ಹಾಗೂ ಅವರ ರಾಜಕೀಯ ಜೀವನದ ಪ್ರಯಾಣ ಕುರಿತ ಮಾಹಿತಿ ಇದರಲ್ಲಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಪ್ರಧಾನಿ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ ಅಂತ್ಯದಲ್ಲಿ ಗುಜರಾತ್ ನಿಂದ ಆರಂಭವಾದ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಂಬೈನಲ್ಲಿ ಮುಕ್ತಾಯವಾಗಿದೆ. ಉತ್ತರಾಖಂಡ್ ನಲ್ಲಿ ಕೂಡ ಚಿತ್ರೀಕರಣ ಮಾಡಲಾಗಿದ್ದು, ಮೋದಿಯವರ ಆರಂಭಿಕ ಜೀವನ ಹಾಗೂ ಅವರ ರಾಜಕೀಯ ಪ್ರಯಾಣದ ಪ್ರಮುಖ ಭಾಗಗಳನ್ನು ಉತ್ತರಕಾಶಿಯ ಗಂಗಾ ಘಾಟ್, ಕಲ್ಪ್ ಕೇದಾರ್ ಮಂದಿರ, ಧರಲಿ ಬಜಾರ್, ಮುಕ್ಬಾ ವಿಲೇಜ್ ಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.
Recent Comments