ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಮತ್ತೋಡು ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಮತ್ತೋಡು ಗ್ರಾಮದ ಎಲ್ಲರೂ ಕೂಲಿ ಕೆಲಸ ಮಾಡಿ ಬಂದು ಮನೆಯ ಕೆಲಸವನ್ನೆಲ್ಲೂ ಮುಗಿಸಿ ತಮ್ಮೂರಿನಲ್ಲಿ ಟಿವಿ ಇರುವವರಮನೆಗೆ ಟಿವಿ ನೋಡಲು ಹೋಗಿದ್ದರು. ಆದರೆ ಅವರು ಟಿವಿ ನೋಡಿ ತಮ್ಮ ಮನೆಗೆ ಬರುವಷ್ಟರಲ್ಲಿ ಮನೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಕೆಲ ಮಹಿಳೆಯರು ಸುಟ್ಟಗಾಯಕ್ಕೂ ತುತ್ತಾಗಿದ್ದಾರೆ. ಕೊನೆಗೂ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಆದರೆ ಸುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದವರು ಬಡ ಕೂಲಿ ಕಾರ್ಮಿಕರು ಆದರೆ ಎಲ್ಲರೂ ಗುಡಿಸಲು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
C News TV Kannada News Online in cnewstv