Breaking News

Monthly Archives: January 2019

ದಿಢೀರನೆ ಕುಸಿದುಬಿದ್ದಿ – ಕಾಗೋಡು ತಿಮ್ಮಪ್ಪ

ಹೊಸನಗರ ತಾಲ್ಲೂಕಿನಲ್ಲಿ ಬಗರ್ ಹುಕುಂ ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಗೋಡು ತಿಮ್ಮಪ್ಪ ದಿಢೀರನೆ ಕುಸಿದುಬಿದ್ದಿದ್ದಾರೆ. ದೇಹದಲ್ಲಿ ಸಕ್ಕರೆ ಪ್ರಮಾಣ ವ್ಯತ್ಯಾಸದಿಂದ ತಲೆಸುತ್ತಿ ಕುಸಿದು ಬಿದ್ದಿದ್ದಾರೆ. ಯಾವುದೇ ತೊಂದರೆ ಇಲ್ಲ, ಈಗ ಚೇತರಿಸಿಕೊಂಡಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.  

Read More »

ಯುವಕನಿಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

ಯುವಕನಿಗೆ ಬಿಯರ್ ಬಾಟಲಿಯಿಂದ ತಲೆ ಹಿಂಭಾಗ ಹೊಡೆದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಗ್ರಾಮದ ಮಾರ್ಗದಲ್ಲಿ ನಡೆದಿದೆ. ಗಾಯಗೊಂಡಿರುವ ವ್ಯಕ್ತಿ ಜ್ಯೋತಿ ನಗರದ ನಿವಾಸಿ ಮೆಕ್ಯಾನಿಕ್ ಮಂಜುನಾಥ್.. ಲಕ್ಕಿನಕೊಪ್ಪ ಗ್ರಾಮದ ಮಾರ್ಗದಲ್ಲಿ ನಡೆದುಕೊಂಡು ಹೋಗುವ ವೇಳೆ ನಾಲ್ಕೈದು ಜನ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮೊದಲು ಮಂಜುನಾಥನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ತಲೆಗೆ, ಮುಖಕ್ಕೆ ಬಲವಾಗಿ ಹೊಡೆದ ಪರಿಣಾಮ ತೀವ್ರ ರಕ್ತ ಸ್ರಾವವಾಗಿದೆ. ಕೂಡಲೇ ತೀವ್ರವಾಗಿ ಗಾಯಗೊಂಡ ಮಂಜುನಾಥ್ ಅವರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ...

Read More »

ಸುತ್ತೂರಿನಲ್ಲಿ ಉತ್ಸವ ಮೂರ್ತಿ ಬೀಳ್ಕೊಗೆ ಸಮಾರಂಭ

ಸುತ್ತೂರು ಮಹಾಸಂಸ್ಥಾನದ 1059ನೆಯ ಜಯಂತಿ ಮಹೋತ್ಸವದ ಅಂಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಉತ್ಸವ ಮೂರ್ತಿಯನ್ನು ಬೀಳ್ಕೊಡುವ ಸಮಾರಂಭವನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ಸುತ್ತೂರು ಸಮೀತಿಯ ಪ್ರಮುಖರಾದ ಶಿವಕುಮಾರ್ ಸ್ವಾಮಿಗಳು,  ಗ್ರಾಮಸ್ಥರು  ಹಾಗು ಉತ್ಸವ ಸಮಿತಿಯ ಪ್ರಮುಖರಾದ ರುದ್ರೇಶ್ ಮಂಗೋಟೆ ಹಾಗೂ ಸದಸ್ಯರಾದ ತೇಜಸ್ ನಿಧಿಗೆ ಹಾಜರಿದ್ದರು.

Read More »

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನದಂತೆ ಅಂಗಡಿ, ಮುಂಗಟ್ಟುಗಳು ತೆರೆದಿವೆ. ಹೂವಿನ ಅಂಗಡಿಗಳು, ತಿಂಡಿ ಗಾಡಿಯವರು, ಚಿಲ್ಲರೆ ವ್ಯಾಪಾರಸ್ಥರು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ.   ನಗರದಲ್ಲಿ ಎಂದಿನಂತೆ ಆಟೋ, ಖಾಸಗಿ ಬಸ್, ಲಾರಿ ಸಂಚಾರವಿದೆ..ಬಂದ್‌ ಗೆ ಕೆಎಸ್‌ಆರ್‌ಟಿಸಿ ಬೆಂಬಲ ಸೂಚಿಸಿದೆ ಹಾಗಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ, ಎಲ್ಲಾ ಖಾಸಗಿ ಬಸ್ ಗಳ ಸಂಚಾರವಿದೆ. ಬಂದ್ ಗೆ ಬೆಂಬಲ ನೀಡುತ್ತಿರುವ ಅಂಚೆ ಕಚೇರಿ, ಬ್ಯಾಂಕ್ ಗಳನ್ನೂ ಹೊರತುಪಡಿಸಿ ಜನಜೀವನದ ಎಂದಿನಂತೆ ಇದೆ.

Read More »

ಭಾರತ್ ಬಂದ್ ಹಿನ್ನೆಲೆ…ಶಿವಮೊಗ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ…ಜಿಲ್ಲಾಧಿಕಾರಿ ಕೆ.ಎ.ದಯಾನಂದ್

  ಪರೀಕ್ಷೆ ಹತ್ತಿರವಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಖಾಸಗಿ ವಲಯದ ವಾಹನಗಳ ಅವಲಂಬನೆ ಹೆಚ್ಚಿರುವುದರಿಂದ ಖಾಸಗಿ ವಾಹನ ಮಾಲಿಕರು ಯಾವುದೇ ಬಂದ್ ನಲ್ಲಿ ಭಾಗವಹಿಸದೆ ಇರುವುದರಿಂದ ನಾಳೆ ಶಾಲಾ ಕಾಲೇಜುಗಳಿಗೆ ರಜೆ ನೀಡುವುದಿಲ್ಲ ಎಂದು ತಿಳಿಸಿದರು.

Read More »

ಮಂಗನ ಜ್ವರಕ್ಕೆ ಮತ್ತೊಂದು ಬಲಿ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಮಂಗನ ಜ್ವರದ ಪ್ರಮಾಣ ಹೆಚ್ವಾಗತೊಡಗಿದ್ದು ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣತೊಡಗಿದೆ.ಇಂದು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಮಂಗನ ಜ್ವರದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಮಧ್ಯಾಹ್ನ ಇದೇ ತಾಲೂಕಿನ ವಾಟೆಮಕ್ಕಿ ಗ್ರಾಮದ ರಾಮಕ್ಕ ಒಂದು ವಾರದಿಂದ ಮಂಗನ ಜ್ವರದಿಂದ ಬಳಲುತಿದ್ದು ಇಂದು ಮೃತಪಟ್ಟಿದ್ದಾರೆ.ರಾಮಕ್ಕನ ಮಗ ಮಂಜುನಾಥ ಕಳೆದ ವಾರ ಮಂಗನ ಜ್ವರಕ್ಕೆ ಬಲಿಯಾಗಿದ್ದರು.ಮಂಗನಕಾಯಿಲೆಗೆ ಇದೂವರೆಗೂ ಜಿಲ್ಲೆಯಲ್ಲಿ ಏಳು ...

Read More »

ಹತ್ತು ವರ್ಷಗಳ ನಂತರ ಮತ್ತೆ ಆರಂಭವಾಗಲಿರುವ ಸಹ್ಯಾದ್ರಿ ಉತ್ಸವದ ಲಾಂಚನ ಅನಾವರಣ.

10ವರ್ಷಗಳ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಸಹ್ಯಾದ್ರಿ ಉತ್ಸವವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಲಾಂಚನ ಹಾಗೂ ಘೋಷ ವಾಕ್ಯವನ್ನು ಇಂದು ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದ್ ಅನಾವರಣಗೊಳಿಸಿದ್ದರು. ಹಳೆ ಜೈಲು ಆವರಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು,ಲಭ್ಯವಿರುವ ಅನುದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಹ್ಯಾದ್ರಿ ಉತ್ಸವವನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಲಾಗಿದೆ. ರಾಷ್ಟ್ರ,ರಾಜ್ಯಮಟ್ಟದ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುತ್ತಿದೆ. ಉತ್ಸವ ಆಚರಣೆಯಿಂದ ಕಲಾವಿದರಿಗೆ ಆರ್ಥಿಕ ಸಹಾಯ ಸಿಗುವುದು ಮಾತ್ರವಲ್ಲದೆ ಸ್ಥಳೀಯ ಕಲೆಗಳಿಗೆ ಪ್ರೋತ್ಸಾಹ ನೀಡಲು ಸಾಧ್ಯವಿದೆ. ಸಾಹಸ ಕ್ರೀಡೆಗಳು, ಜನಪದ ಕ್ರೀಡೆಗಳು, ಮ್ಯಾರಥಾನ್, ...

Read More »

ಸುತ್ತೂರು ಜಯಂತ್ಯುತ್ಸವಕ್ಕೆ ಸಜ್ಜಾದ ಶಿವಮೊಗ್ಗ ನಗರ

ಇದೇ ಮೊದಲ ಬಾರಿಗೆ ಸುತ್ತೂರು ಶಿವರಾತ್ರಿಶ್ವರ ಆದಿ ಜಗದ್ಗುರುಗಳ 1059ನೇ ಜಯಂತ್ಯುತ್ಸವ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದ್ದು (ಹಳೆ ಜೈಲು ಆವರಣ) ಅಲ್ಲಮ್ಮ ಪ್ರಭು ಬಯಲು ಸಜ್ಜಾಗಿದೆ. ಇಂದು ಆದಿಜಗದ್ಗುರುಗಳ ಮೂರ್ತಿ ಹಾಗೂ ಸುತ್ತೂರು ಶ್ರೀಗಳು ಪುರ ಪ್ರವೇಶವನ್ನು ನಡೆಸಿದ್ದು, ನಾಳೆ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.   ಜಯಂತ್ಯೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು , ಪೇಜಾವರ ಸ್ವಾಮೀಜಿ , ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರುಗಳು ಉಪಸ್ಥಿತರಿರುತ್ತಾರೆ. ಜಯಂತಿ ...

Read More »

ಆಯುಷ್ಮಾನ್ – ಉಜ್ವಲ್ ಯೋಜನೆಯ ಲಾಭ ಪಡೆಯಿರಿ : ಬಿವೈ ರಾಘವೇಂದ್ರ

ಆಯುಷ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುತ್ತಿದೆ ರಾಜ್ಯ ಸರ್ಕಾರದ ಶೇ 40 ಕೇಂದ್ರ ಸರ್ಕಾರದ ಶೇ 60 ರಷ್ಟು ಹಣವನ್ನು ಒದಗಿಸಿರುವುದರಿಂದ ಈ ಯೋಜನೆಗೆ ಆಯುಷ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಎಂದು ಕರೆಯಲಾಗುತ್ತಿದೆ. ಪ್ರತಿ ವರ್ಷ ರಾಜ್ಯ ಸರ್ಕಾರ 286 ಕೋಟಿ ರು ಕೇಂದ್ರ ಸರ್ಕಾರ 782 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 42600 ಆರೋಗ್ಯ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಆಯುಷ್ ಭಾರತ ಆರೋಗ್ಯ ಯೋಜನೆ ಮತ್ತು ಪ್ರಧಾನಮಂತ್ರಿ ಯವರ ಉಜ್ವಲ ...

Read More »

ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಯುವಕರು.

ಗಾಂಜಾ ಮತ್ತಿನಲ್ಲಿದ್ದ ಇಬ್ಬರು ಯುವಕರು ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂಸಿ ‍ ಪೊಲೀಸ್ ಠಾಣೆ ಪೇದೆ ಮಂಜುನಾಥ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಇವರ ಬಳಿ ಹಣವನ್ನು ಕೇಳಿದ್ದಾರೆ ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಮಂಜುನಾಥರವರ ಕೈಕಾಲು ಕುತ್ತಿಗೆ ಭಾಗಕ್ಕೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ. ಜನ ಸೇರುತ್ತಿದ್ದಂತೆ ಇಬ್ಬರೂ ಯುವಕರು ಸ್ಥಳದಿಂದ ಪರಾರಿ ಆಗಿದ್ದಾರೆ. ತಕ್ಷಣ ಗಾಯಗೊಂಡ ಮಂಜುನಾಥ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments