Breaking News

ಶಿವಮೊಗ್ಗ

ಗಂಡನಿಂದ ಭೀಕರವಾಗಿ ಹೆಂಡತಿ ಕೊಲೆ: ಆರೋಪಿ ಅಂದರ್

ಶಿವಮೊಗ್ಗ: ಪತಿಯಿಂದಲೇ ಪತ್ನಿ ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಗರದ ವಾದಿ-ಎ-ಹುದಾದ 5 ಕ್ರಾಸ್ ನಲ್ಲಿ ಘಟನೆ ನಡೆದಿದ್ದು, ರುಕ್ಸಾನ(38) ಎಂಬ ಮಹಿಳೆ ಕೊಲೆಯಾಗಿದ್ದಾರೆ. ಎಸಿ ಮೆಕ್ಯಾನಿಕ್ ಯೂಸಫ್ ಹಾಗೂ ಆತನ ಪತ್ನಿ ರುಕ್ಸಾನ ನಡುವೆ ಗಲಾಟೆಯಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ. ಕೌಟುಂಬಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಆರೋಪಿ ಯೂಸಫ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್

ಶಿವಮೊಗ್ಗ: ಮಂಗಳೂರಿನಿಂದ ದಾವಣಗೆರೆಗೆ ಚಲಿಸುತ್ತಿದ್ದ ಖಾಸ ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಚಾಲಕ ಮತ್ತು ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮಂಗಳೂರಿನಿಂದ ರಾತ್ರಿ ಹೊರಟಿದ್ದ ಖಾಸಗಿ ಬಸ್ ನಲ್ಲಿ 18 ಜನ ಪ್ರಯಾಣಿಕರಿದ್ದರು. ಬೆಳಗಿನ ಜಾವ ಸಕ್ರೆಬೈಲು ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಪ್ರಯಾಣಿಕರನ್ನ ಕೆಳಗೆ ಇಳಿಸಿದ ಬಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗೆ ...

Read More »

ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಜಿಲ್ಲೆಯ ಮೂವರು ಆಯ್ಕೆ

ಶಿವಮೊಗ್ಗ: ರಾಜಸ್ಥಾನದ ಜೈಪುರದಲ್ಲಿ ಜನವರಿ 3 ರಿಂದ 7 ವರೆಗೆ ನಡೆಯಲಿರುವ ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಶರಾವತಿ ಹಿನ್ನೀರಿನ ಕರೂರು ಹೋಬಳಿಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇಲ್ಲಿನ ಮಳೂರು ಗ್ರಾಮದ ಕೀರ್ತನ್. ಆರ್, ಕಿರೇತೋಡಿ ಗ್ರಾಮದ ಗಣೇಶ್.ಎಂ ಹಾಗೂ ಹೊನಗಲು ಗ್ರಾಮದ ಮಣಿಕಂಠ.ಎಂ.ಸಿ ಆಯ್ಕೆಯಾಗಿದ್ದಾರೆ.   ಈ ಮೂವರು ಕೂಡ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ನಿತಿನ್ ತಂಡದ ಕೋಚ್ ಆಗಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

Read More »

ರೇಣುಕಾಸ್ವಾಮಿ ಮರ್ಡರ್ ಕೇಸ್- ಚಿತ್ರದುರ್ಗದ ಜಗದೀಶ್ ಸಹ ಬಿಡುಗಡೆ

ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ 6ನೇ ಆರೋಪಿ ಜಗದೀಶ್ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆಯಾಗಿದ್ದಾನೆ. ಕಳೆದ ವಾರವೇ ನ್ಯಾಯಾಲಯವು ಏಳು ಮಂದಿಗೆ ಜಾಮೀನು ನೀಡಿದರೂ ಐವರು ಮಾತ್ರ ಜಾಮೀನು ಷರತ್ತುಗಳನ್ನು ಪೂರೈಸಿದ್ದರಿಂದ ಅವರನ್ನು ಮಂಗಳವಾರವೇ ಬಿಡುಗಡೆಗೊಳಿಸಲಾಗಿತ್ತು. ಎ-6 ಜಗದೀಶ್ ಒಂದು ದಿನ ತಡವಾಗಿ ಜಾಮೀನು ಷರತ್ತು ಪೂರೈಸಿದ ಹಿನ್ನೆಲೆ ಬುಧವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಜಗದೀಶ್ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ಯುವ ತಂಡದಲ್ಲಿದ್ದ ಜಗದೀಶ್ 6 ನೇ ಆರೋಪಿಯಾಗಿದ್ದ. ಪರಪ್ಪನ ...

Read More »

ಶಿಕ್ಷಣ ಸಚಿವರಿಂದ ವಿಶೇಷ ವ್ಯವಸ್ಥೆ: ಅಧಿವೇಶನ ವೀಕ್ಷಿಸಿದ ಸೊರಬದ ವಿದ್ಯಾರ್ಥಿಗಳು

ಶಿವಮೊಗ್ಗ: ಸೊರಬ ಶಾಸಕ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ವಿವಿಧ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಗೆ ಭೇಟಿ ನೀಡಿ, ಚಳಿಗಾಲದ ಅಧಿವೇಶನ ವೀಕ್ಷಿಸಿದ್ದಾರೆ. ಸೊರಬದ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ಉಭಯ ಸದನದ ಸಭಾಪತಿಗಳಿಂದ ಸಚಿವ ಮಧು ಬಂಗಾರಪ್ಪ ಮೊದಲೇ ಅನುಮತಿ ಪಡೆದಿದ್ದ ಹಿನ್ನೆಲೆ ಬೆಳಗಾವಿಗೆ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಸೊರಬ ತಾಲೂಕಿನ ಸಿರಿವಂತೆ, ಸೊರಬ, ಉಳವಿ ಹಾಗೂ ಆನವಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ...

Read More »

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಶಿವಮೊಗ್ಗ ಜೈಲಿನಿಂದ ಲಕ್ಷ್ಮಣ್ ಗೆ ಬಿಡುಗಡೆ ಭಾಗ್ಯ..

cnewstv | 17.11.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಶಿವಮೊಗ್ಗ ಜೈಲಿನಿಂದ ಲಕ್ಷ್ಮಣ್ ಗೆ ಬಿಡುಗಡೆ ಭಾಗ್ಯ.. ಶಿವಮೊಗ್ಗ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ್ ಗೆ ಇಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯ ಭಾಗ್ಯ ದೊರೆತಿದೆ. ಬೆಂಗಳೂರಿನ  ಪರಪ್ಪನ ಅಗ್ರಹಾರದಲ್ಲಿ ರಾಜಾಧಿತ್ಯ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು ಇಂದು ಜಾಮೀನು ದೊರೆತ ಹಿನ್ನೆಲೆಯಲ್ಲಿ ಆರೋಪಿ ಲಕ್ಷ್ಮಣ್ ನನ್ನು ಬಿಡುಗಡೆ ಮಾಡಲಾಗಿದೆ.‌ ಇಂದು ಬೆಳಿಗ್ಗೆ ಈ ಮೇಲ್ ...

Read More »

ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಅರಳಿ ಸುರಳಿಯ ಯುನಿಯನ್ ಬ್ಯಾಂಕ್ ನ ಮ್ಯಾನೇಜರ್ ಎನ್.ಶ್ರೀವಾಸ್ತವ (38) ಮೃತಪಟ್ಟಿದಾರೆ. ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದ ರಾಮಕೊಂಡದ ಬಳಿ ಶ್ರೀವಾಸ್ತವ ಅವರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಬ್ಯಾಂಕ್ ಮ್ಯಾನೇಜರ್ ಶ್ರೀವಾಸ್ತವ ಅವರು, ಪಟ್ಟಣದ ತುಂಗಾ ನದಿಯಲ್ಲಿ ಸೋಮವಾರದಿಂದ ಕಣ್ಮರೆಯಾಗಿದ್ದರು. ನದಿಯ ದಡದಲ್ಲಿ ಶ್ರೀವಾಸ್ತವ ಅವರ ಮೊಬೈಲ್, ಬಟ್ಟೆ ಹಾಗೂ ಚಪ್ಪಲಿ ಇದ್ದ ಕಾರಣ ನದಿಯಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ಕೂಡ ನಡೆಸಲಾಗಿತ್ತು. ಇಂದು ಬೆಳಿಗ್ಗೆ ...

Read More »

ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ

cnewstv | 03.11.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ ಶಿವಮೊಗ್ಗ : ವಿಶ್ವದಲ್ಲೇ ಅತಿ ಹೆಚ್ಚು ಅಪ್ರೂವಲ್ ರೇಟಿಂಗ್ ಹೊಂದಿರುವ ಅತ್ಯಂತ ಪ್ರಬಲ ನಾಯಕ  ಎಂದು ಜಾಗತಿಕ ಸಂಸ್ಥೆಗಳಿಂದ, ಮಾಧ್ಯಮಗಳಿಂದ ಗೌರವಿಸಲ್ಪಟ್ಟಿರುವ  ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ  ರಾಜ್ಯದ ಮುಖ್ಯಮಂತ್ರಿಗಳಾದ  ಶ್ರೀ ಸಿದ್ದರಾಮಯ್ಯ ತಕ್ಷಣ ತಮ್ಮ ಹೇಳಿಕೆಗೆ ಬೇಷರತ್ ...

Read More »

ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ

cnewstv | 27.10.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ… ಶಿವಮೊಗ್ಗ : ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್( ಸುಭಾಶಣ್ಣ) (72) ವಿಧಿವಶರಾಗಿದ್ದಾರೆ. ವೀರಶೈವ ಸಮಾಜದ ಮುಖಂಡರಾಗಿ, ಬಸವೇಶ್ವರ ಸಮಾಜದ ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದರು. ನಾಲ್ಕು ಭಾರಿ ನಗರ ಸಭೆ ಸದಸ್ಯರಾಗಿ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ರಾಜಶೇಖರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಕಳೆದ‌ ಮತ್ತೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡ ...

Read More »

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ

cnewstv | 24.10.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ತಾವುಗಳು ನಾಡು-ನುಡಿ ಜಲ ಭಾಷೆ ಗಡಿ ವಿಚಾರ ರೈತರಪರವಾಗಿ ವಿದ್ಯಾರ್ಥಿಪರವಾಗಿ ನಿರಂತರವಾಗಿ ಇರುವಂತೆ ಹಾಗೂ ಸಂಘಟನೆಯ ಇತರೆ ಪದಾಧಿಕಾರಿಗಳ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಸಹ ವಹಿಸಿ ಸಂಘಟನೆಯನ್ನು ಬಲಪಡಿಸುವಂತೆ ಆದೇಶಿಸಿದ್ದಾರೆ.  ಸುದ್ದಿ ...

Read More »