Breaking News

ಶಿವಮೊಗ್ಗ

ಗುಲಾಬಿ, ಚಪ್ಪಲಿ ಇಟ್ಟು ನದಿಗೆ ಧುಮುಕಿ ಪ್ರೇಮಿಗಳ ಆತ್ಮಹತ್ಯೆ.

  ಶಿವಮೊಗ್ಗ : ಬೈಪಾಸ್ ರಸ್ತೆ ಹೊಸ ಸೇತುವೆಯಿಂದ ತುಂಗಾ ನದಿಗೆ ಧುಮುಕಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಯುವಕ ಹಾಗೂ ಯುವತಿ ಕೈಗೆ ವೇಲನ್ನು ಸುತ್ತುಕೊಂಡು ತುಂಗಾ ನದಿಗೆ ಹಾರಿದ್ದಾರೆ. ಸ್ಥಳೀಯರ ನೆರವಿನಿಂದ ಯುವತಿಯರನ್ನು ರಕ್ಷಿಸಿ ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅದರೆ ಚಿಕಿತ್ಸೆ ಫಲಿಸದೆ ಸಾವಾನಪ್ಪಿದ್ದಾರೆ. ಸ್ಧಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗಮಿಸಿದ್ದು ಯುವಕನ ಶವಕ್ಕಾಗಿ ತುಂಗಾ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹುರುಳಿಹಳ್ಳಿ ಗ್ರಾಮದ ಸಂತೋಷ(25) ಹಾಗೂ ಯುವತಿಯರನ್ನು ಕಾಕನಹಸುಡಿ ಗ್ರಾಮದ ಅನುಷಾ(20) ಎಂದು ...

Read More »

ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ

  ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ವಿಜಯ್ ರಾಘವೇಂದ್ರ ರವರು ಜೋಗ ನೋಡಿಕೊಂಡು ವಾಪಸ್ ಬೆಂಗಳೂರಿಗೆ ಹೋಗುವಾದ ಶಿವಮೊಗ್ಗದ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸಿದ್ದಾರೆ ಅದರೆ ಬಂಕ್ ಸಿಬ್ಬಂದಿಗಳು ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ. ನಂತರ ಸಿಬ್ಬಂದಿಗಳು ಹಾಗೂ ಮಾಲೀಕರು ವಿಜಯ್ ರಾಘವೇಂದ್ರ ಬಳಿ ಕ್ಷಮೆ ಯಾಚಿಸಿದ್ದಾರೆ. ಬಳಿಕ ಕಾರನ್ನು ಲಾರಿಯಲ್ಲಿ ಹತ್ತಿಸಿ‌ ಸರ್ವೀಸ್ ಗೆ ಕಳುಹಿ, ವಿಜಯ್ ರಾಘವೇಂದ್ರ‌ ಹಾಗೂ ಕುಟುಂಬದವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡಿದರು.

Read More »

ವಿದ್ಯುತ್ ಕಂಬಗಳಿಗೆ ಅಡ್ಡಿಯಾಗುವ ಅಕೇಶಿಯಾ ಮರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಿ: ಸಚಿವ ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ : ಮಲೆನಾಡು ಭಾಗದಲ್ಲಿ ವಿದ್ಯುತ್ ಕಂಬಗಳ ಸಮೀಪ ಅಕೇಶಿಯಾ ಮರಗಳನ್ನು ನೆಟ್ಟಿರುವುದರಿಂದ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಮರಗಳನ್ನು ತಕ್ಷಣ ತೆರವುಗೊಳಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಎರಡು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸದರೆ ಮಾತ್ರ ಈ ಭಾಗದ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ...

Read More »

ಕಳೆದ ಒಂದು ದಶಕದಲ್ಲಿ 40ಸಾವಿರ ಎಕ್ರೆ ಕಾನು ಅರಣ್ಯ ರಕ್ಷಣೆ: ಅನಂತ ಹೆಗಡೆ ಅಶೀಸರ

  ಶಿವಮೊಗ್ಗ : ಕಾನು ಅರಣ್ಯ ಸಂರಕ್ಷಣಾ ಯೋಜನೆ ಜಾರಿಗೊಳಿಸಿದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಸುಮಾರು 40ಸಾವಿರ ಎಕ್ರೆ ಕಾನು ಅರಣ್ಯ ಪ್ರದೇಶ ಸಂರಕ್ಷಣೆ ಸಾಧ್ಯವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 2ಲಕ್ಷ ಎಕ್ರೆಯಷ್ಟಿದ್ದ ಕಾನು ಅರಣ್ಯ ಪ್ರದೇಶ ಇದೀಗ 1.40ಲಕ್ಷ ಎಕ್ರೆಗೆ ಇಳಿದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ 70ಲಕ್ಷ ಕಾನು ಅರಣ್ಯ ಪ್ರದೇಶ ಸಂರಕ್ಷಿಸುವ ಗುರಿಯನ್ನು ಹೊಂದಲಾಗಿದ್ದು, ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಲು ...

Read More »

ಭದ್ರಾ ಜಲಾಶಯಕ್ಕೆ ಭೇಟಿ ಕೊಟ್ಟ D.Boss. ಇನ್ನೂ ಒಂದೆರೆಡು ದಿನ ಶಿವಮೊಗ್ಗದಲ್ಲಿ ಪ್ರವಾಸ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕೆಲವು ನಟರು ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಭರ್ತಿಯಾಗುತ್ತಿರುವ ಡ್ಯಾಂ ವೀಕ್ಷಿಸಿದ್ದಾರೆ. ನಟರಾದ ದರ್ಶನ್, ಚಿಕ್ಕಣ್ಣ ಸೇರಿದಂತೆ ಹಲವರು ಭದ್ರಾ ಡ್ಯಾಂಗೆ ಭೇಟಿ ನೀಡಿದ್ದರು. ಕೆಲವು ಹೊತ್ತು ಭದ್ರಾ ಡ್ಯಾಂ ವೀಕ್ಷಿಸಿದ ನಟರ ಟೀಮ್, ಬಳಿಕ ಅರಣ್ಯ ಇಲಾಖೆ ಐಬಿಯಲ್ಲಿ ಉಳಿದುಕೊಂಡಿದ್ದರು. ನಂತರ ಭದ್ರಾವತಿ ಮತ್ತು ಶಿವಮೊಗ್ಗದ ಕೆಲವು ಸ್ನೇಹಿತರ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇವತ್ತು ನಟರ ಟೀಮ್ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಲಿದೆ. ಮಧ್ಯಾಹ್ನದವರೆಗೆ ಸಫಾರಿಯಲ್ಲಿ ಭಾಗವಹಿಸಲಿದ್ದಾರೆ. ಅಭಯಾರಣ್ಯದ ಮಧ್ಯದಲ್ಲಿರುವ ಬ್ರಿಟೀಷರ ಕಾಲದ ಬಂಗಲೆಯಲ್ಲಿ ...

Read More »

ಶರಾವತಿ ಹಿನ್ನೀರಿನಲ್ಲಿ ಸಿಲುಕಿಕೊಂಡಿದ್ದ ಲಾಂಚ್ ಕೊನೆಗೂ ಸೇಫ್.

ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಲಾಂಚ್ ನಡುನೀರಿನ ಮಧ್ಯೆ ಸಿಲುಕಿಕೊಂಡು ಕೆಲ ಕಾಲ‌ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ‌ ಕೊನೆಗೂ ಲಾಂಚ್ ಸೇಫಾಗಿ ದಡ ಸೇರಿದ್ದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹಸಿರುಮಕ್ಕಿ ಲಾಂಚ್ ಹೊಸನಗರ ತಾಲೂಕು ಕೆ.ಬಿ.ಕ್ರಾಸ್ ನ ಕಡೆಯಿಂದ ಸಾಗರ ತಾಲೂಕಿನ ಹುಲಿದೇವರ ಬನದ ಕಡೆಗೆ ಹಿನ್ನೀರಿನಲ್ಲಿ ಪ್ರಯಾಣ ಆರಂಭಿಸಿತ್ತು. ಆದರೆ ಇದೇ ವೇಳೆಗೆ ಬಾರಿ ಗಾಳಿ ಆರಂಭಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಲಾಂಚ್ ನಡುನೀರಿನಲ್ಲೇ ಸಿಲುಕಿಕೊಂಡಿದೆ. ಗಾಳಿಯ ರಭಸ ಹೆಚ್ಚಾದಂತೆ ಲಾಂಚ್ ಇನ್ನೊಂದೆಡೆಗೆ ...

Read More »

ತುಂಬಿದ ತುಂಗೆಗೆ ಈಶ್ವರಪ್ಪನವರಿಂದ ಬಾಗೀನ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಇಂದು ತುಂಬಿದ ತುಂಗೆಗೆ ಜಿಲ್ಲಾ ಉಸ್ತುವಾರಿ‌ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಕುಟುಂಬದವರು ತುಂಗಾ ಪೂಜೆ‌ ಸಲ್ಲಿಸಿ ಬಾಗೀನ ಅರ್ಪಿಸಿದರು. ತೀರ್ಥಹಳ್ಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು, ಈಗಾಗಲೆ ತುಂಗಾ ಜಲಾಶಯ ಭರ್ತಿಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಜಲಾಶಯದಿಂದ ತುಂಗಾ ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಶಿವಮೊಗ್ಗ ನಗರದ‌ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ...

Read More »

15 ದಿನದ ನವಜಾತ ಶಿಶುವಿನ ಮಾರಾಟಕ್ಕೆ ಯತ್ನ

  ಶಿವಮೊಗ್ಗ : ಟಿಪ್ಪು ನಗರದಲ್ಲಿ 15 ದಿನದ ನವಜಾತ ಶಿಶುವನ್ನು ಮಾರಾಟ ಮಾಡಲು ಮುಂದಾಗಿದ್ದ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಯ ಪೋಲಿಸರು ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಲಕ್ಷದ 50 ಸಾವಿರ ರೂಪಾಯಿಗೆ ಮಗುವನ್ನು ಮಾರಟ ಮಾಡಲು ಯತ್ನಿಸಿದ್ದ ಶೈಲ, ಸುಮಾ, ತುಳಸಿ, ಉಷಾ ಹಾಗೂ ಷಣ್ಮುಗ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀನಿವಾಸ್ ಮತ್ತು ಉಷಾ ದಂಪತಿಗಳಿಗೆ ಕಳೆದ 15 ದಿನಗಳ ಹಿಂದೆ ಗಂಡು ಮಗುವಾಗಿದೆ. ಬಡತನದ ಹಿನ್ನೆಲೆಯಲ್ಲಿ ಈ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದು ಒಂದು ಒಳ್ಳೆಯ ...

Read More »

4ಲಕ್ಷ ಆಯುರ್ವೇದಿಕ್ ಕಿಟ್ ವಿತರಣೆಗೆ ಚಾಲನೆ

  ಶಿವಮೊಗ್ಗ : ಕರೋನಾ ನಿಯಂತ್ರಣಕ್ಕೆ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ 4ಲಕ್ಷ ಮಂದಿಗೆ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿವರ್ಧಕ ಕಿಟ್ ವಿತರಣೆ ಮಾಡುತ್ತಿರುವುದು ಬಹುಶಃ ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು ಡಾ.ಗಿರಿಧರ ಕಜೆ ಅವರ ಮಾರ್ಗದರ್ಶನದಲ್ಲಿ ಕಿಟ್ ಸಿದ್ಧಪಡಿಸಲಾಗಿದ್ದು, ಪ್ರಥಮ ಹಂತದಲ್ಲಿ 1ಲಕ್ಷ ಕಿಟ್‍ಗಳು ವಿತರಣೆಗೆ ಸಿದ್ಧವಾಗಿದೆ. ಇನ್ನೂ ಎರಡು ಹಂತಗಳಲ್ಲಿ ಶಿವಮೊಗ್ಗ ನಗರದ ಪ್ರತಿಯೊಬ್ಬರಿಗೂ ಕಿಟ್ ಹಂಚಲಾಗುವುದು. ಇದಕ್ಕಾಗಿ ವಾರ್ಡ್‍ವಾರು ಸಿದ್ಧತೆಗಳನ್ನು ಮಾಡಲಾಗಿದ್ದು, ಕಿಟ್‍ಗಳನ್ನು ...

Read More »

ಕೊರೋನಾ ಖರ್ಚು ಲೆಕ್ಕ ಕೊಡಿ : ಅಂಚೆ ಪತ್ರ ಚಳುವಳಿ ನಡೆಸಿದ ಯುವ ಕಾಂಗ್ರೆಸ್

  ಕೊರೋನಾ ಮಹಾಮಾರಿಯಿಂದ ರಾಜ್ಯದ ಜನ ತತ್ತರಿಸಿದ್ದು. ಇಂತಹ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ನೀಡಬೇಕಾದ ಸರ್ಕಾರ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸಾವಿರಾರು ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿರುವುದು ರಾಜ್ಯದ ಸಚಿವರುಗಳು ನೀಡುತ್ತಿರುವ ಹೇಳಿಕೆಗಳಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿದ್ದು. ರಾಜ್ಯ ಸರ್ಕಾರದ “ಕೊರೋನಾ ಖರ್ಚು – ಲೆಕ್ಕ ಕೊಡಿ” ಅಂಚೆ ಪತ್ರ ಚಳುವಳಿಯನ್ನು ಮಾಡುವ ಮೂಲಕ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಆಗ್ರಹಿಸಲಾಯಿತು. ಕೊರೋನ ಸಂದರ್ಭದಲ್ಲಿ ಖರೀದಿ ಮಾಡಿದ ವೈದ್ಯಕೀಯ ಪರಿಕರಗಳಾದ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್, ಕೊರೋನಾ ಸೊಂಕಿತರಿಗಾಗಿ ಬಳಸುವ ಬೆಡ್ ...

Read More »