ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕೆಲವು ನಟರು ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಭರ್ತಿಯಾಗುತ್ತಿರುವ ಡ್ಯಾಂ ವೀಕ್ಷಿಸಿದ್ದಾರೆ.
ನಟರಾದ ದರ್ಶನ್, ಚಿಕ್ಕಣ್ಣ ಸೇರಿದಂತೆ ಹಲವರು ಭದ್ರಾ ಡ್ಯಾಂಗೆ ಭೇಟಿ ನೀಡಿದ್ದರು. ಕೆಲವು ಹೊತ್ತು ಭದ್ರಾ ಡ್ಯಾಂ ವೀಕ್ಷಿಸಿದ ನಟರ ಟೀಮ್, ಬಳಿಕ ಅರಣ್ಯ ಇಲಾಖೆ ಐಬಿಯಲ್ಲಿ ಉಳಿದುಕೊಂಡಿದ್ದರು. ನಂತರ ಭದ್ರಾವತಿ ಮತ್ತು ಶಿವಮೊಗ್ಗದ ಕೆಲವು ಸ್ನೇಹಿತರ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವತ್ತು ನಟರ ಟೀಮ್ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಲಿದೆ. ಮಧ್ಯಾಹ್ನದವರೆಗೆ ಸಫಾರಿಯಲ್ಲಿ ಭಾಗವಹಿಸಲಿದ್ದಾರೆ. ಅಭಯಾರಣ್ಯದ ಮಧ್ಯದಲ್ಲಿರುವ ಬ್ರಿಟೀಷರ ಕಾಲದ ಬಂಗಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆಯಾಗಿದೆ. ನಟರ ಟೀಮ್ ಒಂದೆರೆಡು ದಿನ ಶಿವಮೊಗ್ಗ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಹಾಗಾಗಿ ಅವರು ಅರಣ್ಯ ಇಲಾಖೆಯ ಐಬಿಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಚಾಲೆಂಜಿಂಗ್ ಸ್ಟಾರ್ ಭೇಟಿ ವಿಚಾರ ತಿಳಿಯುತ್ತಿದ್ದಂತೆ ಶುಕ್ರವಾರ ಅಭಿಮಾನಿಗಳ ದಂಡು ಅರಣ್ಯ ಇಲಾಖೆ ಐಬಿ ಬಳಿಗೆ ದೌಡಾಯಿಸಿತ್ತು. ಆದರೆ ಯಾರೊಬ್ಬರಿಗೂ ಫೋಟೊ ವಿಡಿಯೋ ತೆಗೆದುಕೊಳ್ಳಲು ಅವಕಾಶ ಇರಲಿಲ್ಲ. ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ದರ್ಶನ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ವರದಿ :ನಿತಿನ್ ಎಸ್
Recent Comments