Breaking News

ಶಿವಮೊಗ್ಗ

ಮೂವರು ದರೋಡೆಕೋರರ ಬಂಧನ, ಕೃತ್ಯಕ್ಕೆ ಬಳಸಿದ ಓಮಿನಿ ವಾಹನ ವಶ

  ಶಿವಮೊಗ್ಗ : ಅಕ್ಟೋಬರ್ 14ರಂದು ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಛತ್ರದಳ್ಳಿ ಗ್ರಾಮದ ವಾಸಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಮನೆಯಲ್ಲಿರುವ ಸಮಯದಲ್ಲಿ ಯಾರೋ 05 ಜನ ದರೋಡೆಕೋರರು ಮನೆಗೆ ನುಗ್ಗಿ, ತಮ್ಮ ಕೊರಳಿನಲ್ಲಿದ್ದ ಬಂಗಾರದ ಗುಂಡುಗಳಿದ್ದ ತಾಳಿ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಆರೋಪಿಗಳ ಪತ್ತೆಗಾಗಿಶ್ರೀನಿವಾಸಲು IPS, ಎ.ಎಸ್.ಪಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿಮರುಳಸಿದ್ದಪ್ಪ ಪೊಲೀಸ್ ...

Read More »

ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್ಗೆ 20 ಸಾವಿರ ದಂಡ

  ಸಕಾಲದಲ್ಲಿ ಉದ್ಯಮ ಪರವಾನಗಿ ನೀಡದೆ ವಿಳಂಬ ಮಾಡಿದ್ದಕ್ಕೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗ್ರಾಹಕರ ವೇದಿಕೆಯು ದಂಡ ವಿಧಿಸಿ ತೀರ್ಪು ನೀಡಿದೆ. ವುಡ್ ಇಂಡಸ್ಟ್ರಿಗೋಸ್ಕರ ಎಸ್.ಎನ್.ಫಜಲುದ್ದೀನ್ ಎಂಬುವವರು 2018ರ ಜನವರಿ 11ರಂದು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಡತ ಕಳೆದಿರುವುದಾಗಿ ಹೇಳಿದ್ದಕ್ಕೆ 2018ರ ಮೇ 25ರಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಪರವಾನಗಿಗಾಗಿ 5 ಸಾವಿರ ರೂ. ಚಲನ್ ಕೂಡ ಪಾವತಿಸಿದ್ದಾರೆ. ಸಕಾಲ ಕಾಯಿದೆ ಅಡಿ ಫೆ.21ರೊಳಗೆ ಉದ್ಯಮ ಪರವಾನಗಿಯನ್ನು ನೀಡಬೇಕಿತ್ತು. ಆದರೆ, 2019ರ ಏಪ್ರಿಲ್ 3ರಂದು ಲೈಸೆನ್ಸ್ ನೀಡಿದ್ದು, ಅದರ ಅವಧಿ 2018ರ ...

Read More »

ಮತ್ತೆ ಕುಸಿದ ರಂಜದಕಟ್ಟೆ ಸೇತುವೆ

ಶಿವಮೊಗ್ಗ: ಸೆಪ್ಟಂಬರ್ ತಿಂಗಳಲ್ಲಿ‌ ಸುರಿದ ಭಾರಿ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆಯ ಬಿಂತಳ ಹಳ್ಳ ಸೇತುವೆ ಕುಸಿದು ಶಿವಮೊಗ್ಗ ಉಡುಪಿ ನಡುವಿನ ಸಂಚಾರ ಸ್ಥಗಿತಗೊಂಡಿತ್ತು. ಈ ಮಾರ್ಗವಾಗಿ ಮಣಿಪಾಲ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಎರಡೇ ದಿನದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾತ್ಕಾಲಿಕ ಸೇತುವೆಯೂ ಕುಸಿದಿದ್ದು ಮತ್ತೆ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದೇ ರೀತಿ ಮಳೆ‌ ಮುಂದುವರಿದಿದ್ದೇ ಆದಲ್ಲಿ ತಾತ್ಕಾಲಿಕ ಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗುವ ಆತಂಕ ಎದುರಾಗಿದೆ. ಇದೀಗ ಶಿವಮೊಗ್ಗದಿಂದ ...

Read More »

“ಅರೆಕಾ‌ ಶಾಂಪು” ನಿವೇದನ್ ನಿಂಪೆಯವರ ಮತ್ತೊಂದು ಕೊಡುಗೆ.

  ಶಿವಮೊಗ್ಗ : ಅರೇಕಾ ಟೀ ಉತ್ಪಾದಿಸುವ ಮೂಲಕ ಪ್ರಖ್ಯಾತರಾಗಿದ್ದ ಮಲೆನಾಡಿನ ಯುವಕ ನಿವೇದನ್ ನೆಂಪೆ ಯವರು ಈ ಬಾರಿ ಮತ್ತೊಂದು ಅಡಿಕೆಯ ಮೌಲ್ಯದಾರಿತ ಉತ್ಪನ್ನ ಅರೆಕಾ ಶಾಂಪು ತಯಾರಿಸಿದ್ದು, ಇದು ಅಡಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅರೆಕಾ ಶಾಂಪು ಡಿಸೆಂಬರ್ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಪ್ರತಿ ಅರೇಕಾ ಶಂಪೂ ಪ್ಯಾಕೆಟ್ ಗೆ ಎರಡು ರೂಪಾಯಿ ಬೆಲೆ ನಿಗದಿಪಡಿಸಲು ಉದ್ದೇಶಿಸಲಾಗಿದೆ. ಅಡಕೆ ಕೇವಲ ಗುಟ್ಕಾ ತಯಾರಿಕೆಗೆ ಮಾತ್ರ ಸೀಮಿತವಲ್ಲ. ಅಡಕೆಯಿಂದ ಆರೋಗ್ಯವರ್ಧಕ ಔಷಧಿಯುಕ್ತ ಉತ್ಪನ್ನಗಳನ್ನು ತಯಾರಿಸಬಹುದು ಎಂಬ ಮಹತ್ವಾಕಾಂಕ್ಷೆಯಿಂದ ಈ ಆರೆಕಾ ಶಾಂಪು ...

Read More »

ಸಾಗರ-ತಾಳಗುಪ್ಪ ರೈಲ್ವೆ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

  ಶಿವಮೊಗ್ಗ  : ಸಾಗರ-ಜಂಬುಗಾರು-ತಾಳಗುಪ್ಪ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 152ರ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ಇರುವುದರಿಂದ ಅಕ್ಟೋಬರ್ 16 ರ ಬೆಳಗ್ಗೆ 7.30 ರಿಂದ ಅ. 17 ರ ಬೆಳಗ್ಗೆ 7.30 ರವರಿಗೆ ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ಯಾಯವಾಗಿ ಲೆವೆಲ್ ಕ್ರಾಸ್ ನಂ. 147ರ ಸಾಗರ-ಕಾನಲೆ ಕ್ರಾಸ್-ಗಡೆಮನೆ-ತಾಳಗುಪ್ಪ ಅಥವಾ ಸಿದ್ದಾಪುರ ಮುಖಾಂತರ ಹಾಗೂ ಸಿದ್ದಾಪುರ ಲೆವೆಲ್ ಕ್ರಾಸಿಂಗ್-13ರ ಸಾಗರ-ಕೆಳದಿ-ಕಾಗೋಡು-ತಾಳಗುಪ್ಪ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

Read More »

” ಸೇವ್ ರೀಚಾರ್ಜ್ ” ಎಂಬ ವೆಬ್ ಸೈಟ್ ಹೆಸರಿನಲ್ಲಿ ಗ್ರಾಹಕರಿಗೆ ದೊಖಾ.

  ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಮೊಬೈಲ್ ಗ್ರಾಹಕರಿಗೆ ಪ್ರತೀ ತಿಂಗಳು 249 ರೂ. ರಿಚಾರ್ಜ್ ಮಾಡಿ, ಪ್ರತಿ ದಿನ 2 gb ಡಾಟಾ, ಅನ್ ಲಿಮಿಟೆಡ್ ಹೊರಹೋಗುವ ಕರೆ, 100 sms ಉಚಿತವಾಗಿ ನೀಡುತ್ತೇವೆ ಎಂದು ಮೊಬೈಲ್ ಗ್ರಾಹಕರಿಂದ ಒಂದು ವರ್ಷದ ರಿಚಾರ್ಜ್ ಮಾಡುತ್ತೇವೆಂದು ನಂಬಿಸಿ 1250 ರೂ. ವರ್ಷದ ಪ್ಯಾಕೇಜ್ ಎಂದು ಹೇಳಿ ಸೇವ್ ರಿಚಾರ್ಜ್ ವಾಲೆಟ್ ಗೆ ಹಣ ಹಾಕಿಸಿಕೊಳ್ಳಲಾಗಿದೆ. ವೆಬ್ ಸೈಟ್ ಮೋಸದ ಜಾಲ ಅರಿಯದೆ ಹಣ ನೀಡಿ ಪಿನ್ ಪಡೆದು ಗ್ರಾಹಕರಿಂದ ವಾಲೆಟ್ ಗೆ ಹಣ ...

Read More »

845ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರದ ಅನುಮೋದನೆ: ಕೆ.ಎಸ್.ಗುರುಮೂರ್ತಿ

  ಶಿವಮೊಗ್ಗ : ಪ್ರಸ್ತುತ ಸಾಲಿನಲ್ಲಿ 845ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ಅನುಮೋದನೆ ದೊರೆತಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 33ಕೋಟಿ ರೂ. ಅಗತ್ಯವಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರು ತಿಳಿಸಿದರು. ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಡಳಿಯ ಸರ್ವ ಸದಸ್ಯರ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸಾಲಿನ 845 ಕಾಮಗಾರಿಗಳ ಪೈಕಿ 348ಕಾಮಗಾರಿಗಳು ಪೂರ್ಣಗೊಂಡಿದ್ದು, 23ಕೋಟಿ ರೂ. ಭರಿಸಲಾಗಿದೆ. 497ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ...

Read More »

ಅತ್ಯಾಚಾರ ಪ್ರಕರಣ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಧರಣಿ

  ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗಾಂಧಿ ಪಾರ್ಕಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಮಾಡಲಾಯಿತು. ದೇಶದಲ್ಲಿರುವ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಪ್ರಕರಣಗಳು ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಮೌನ ವಹಿಸುತ್ತಿದೆ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಉತ್ತರ ಪ್ರದೇಶದ ಹಾಥರಸ್ ಗಾಮ್ರದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡ್ತಾ ಇದೆ ಎಂದು ಜಿಲ್ಲಾ ಕಾಂಗ್ರೆಸ್ ...

Read More »

ಬಲಿಪಡೆಯಲು ಕಾಯುತ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ

  ಶಿವಮೊಗ್ಗ: ಶಿವಮೊಗ್ಗ ನಗರಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿ ಭರದಿಂದ ಸಾಗಿದ್ದು, ಅವೈಜ್ಞಾನಿಕ ಕಾಮಗಾರಿಗಳು ಜನರ ಬಲಿಪಡೆಯಲು ಬಾಯ್ದೆರೆದು ಕುಳಿತಿವೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೆಲಸ ನಡಿಯುತ್ತಿದ್ದು, ರಸ್ತೆ ಮೇಲೆ ಅವೈಜ್ಞಾನಿಕವಾಗಿ ಗುಂಡಿಗಳನ್ನು ತೆಗೆದಿದ್ದರಿಂದಾಗಿ ವಿದ್ಯುತ್ ಕಂಬಗಳು ರಸ್ತೆಗೆ ವಾಲಲಾರಂಭಿಸಿವೆ. ಒಂದು ವೇಳೆ ವಿದ್ಯುತ್ ತಂತಿ ವಾಹನಗಳಿಗೆ ತಗುಲಿದರೆ ಬಾರಿ ಪ್ರಾಣಾಪಾಯವಾಗುವ ಸಾಧ್ಯತೆಯಿದೆ. ಕೂಡಲೇ ಸಂಬಂಧಿಸಿದವರು ಸಮರ್ಪಕ‌ ಕಾಮಗಾರಿ‌ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Read More »

ರೈತರನ್ನು ದೇವರು ಎಂದು ಪರಿಗಣಿಸಿ ತಮ್ಮಿಂದ ಆದಷ್ಟು ಸಹಕಾರವನ್ನು ನೀಡಿ : ಶ್ರೀ ಪ್ರಸನ್ನನಾಥ ಸ್ವಾಮೀಜಿ

ಶಿವಮೊಗ್ಗ: ರೈತರನ್ನು ದೇವರು ಎಂದು ಪರಿಗಣಿಸಿ ತಮ್ಮಿಂದ ಆದಷ್ಟು ಸಹಕಾರವನ್ನು ನೀಡಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖಾ ಮಠಾಧೀಶರಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇಂದು ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗಳಿಗೆ ಸಲಹೆ ನೀಡಿದ್ದಾರೆ. ಇಂದು ನವೀಕೃತಗೊಂಡ ಬ್ಯಾಂಕಿನ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ ಬಳಿಕ ಬ್ಯಾಂಕ್ ಆಡಳಿತ ಮಂಡಳಿಗೆ ಮತ್ತು ಸಿಬ್ಬಂದಿಗಳಿಗೆ ಆಶೀರ್ವಚನ ನೀಡಿದರು. ಇತ್ತೀಚೆಗೆ ಉದ್ಗಾಟನಾ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಭೇಟಿ ನೀಡಲು ಆಗಲಿಲ್ಲ ಎಂದು ತಿಳಿಸಿದ ಅವರು, ಬಡ ರೈತರಿಗೆ ಜಿಲ್ಲಾ ಸಹಕಾರಿ ...

Read More »